“ಕುಟುಂಬ ಪ್ರೇಮ ಮೆರೆದ ಸವಿಕ್ಷಣಗಳು”

0
28

ಶಿವಮೊಗ್ಗ: ಕುಟುಂಬ ಸದಸ್ಯರ ಸಹೋದರತ್ವದ ಪ್ರೀತಿ ಮರೆಯಲಾರದ ಕ್ಷಣಗಳು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ಹೇಳಿದ್ದಾರೆ ಅವರು ಇಂದು ಮಾಜಿ ಉಪಮುಖ್ಯಮಂತ್ರಿ ಕೆ. ಈಶ್ವರಪ್ಪ ಅವರ ಶಿವಮೊಗ್ಗದ ನಿವಾಸಕ್ಕೆ ಭೇಟಿ ನೀಡಿದರು,
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿರುವ ವಿಜಯೇಂದ್ರ ಮಾಜಿ ಸಚಿವರು ಹಾಗೂ ಪಕ್ಷದ ಹಿರಿಯ ನೇತಾರರಾದ ಕೆ.ಎಸ್. ಈಶ್ವರಪ್ಪನವರ ಮನೆಗೆ ತೆರಳಿ ಕುಟುಂಬ ಬಾಂಧವ್ಯದ ಪ್ರೀತಿ, ಆಶೀರ್ವಾದ ಪಡೆಯಲಾಯಿತು.
ಮಾನ್ಯ ಈಶ್ವರಪ್ಪ ದಂಪತಿಗಳ ಪುತ್ರಪ್ರೇಮದ ಆಶೀರ್ವಾದ, ಕುಟುಂಬ ಸದಸ್ಯರ ಸಹೋದರತ್ವದ ಪ್ರೀತಿ ಮರೆಯಲಾರದ ಕ್ಷಣಗಳು. ಈಶ್ವರಪ್ಪನವರ ಪಕ್ಷಕಟ್ಟುವಲ್ಲಿನ ಶಿಸ್ತು, ಬದ್ಧತೆ, ಪರಿಶ್ರಮ ಹಾಗೂ ಅನುಭವದ ಮಾತುಗಳು ನನಗೆ ಹೊಸ ಚೈತನ್ಯ ತುಂಬಿತು. ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಮೇಘರಾಜ್, ಶಾಸಕ ಚೆನ್ನಬಸಪ್ಪ, ವಿಧಾನ ಪರಿಷತ್ ಸದಸ್ಯ ಅರುಣ್, ಮುಖಂಡ ಕಾಂತೇಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವರಾಜ್, ಶ್ರೀನಾಥ್, ದತ್ತಾತ್ರಿ ಸೇರಿದಂತೆ ಪಕ್ಷದ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು ಎಂದು ಬರೆದುಕೊಂಡಿದ್ದಾರೆ.

Previous articleಏಳು ದಶಕಗಳ ಜನಪ್ರಿಯ ಹೋಟೆಲ್‌ ನ್ಯೂ ಕೃಷ್ಣ ಭವನ ಬಂದ್‌!
Next articleಸಿಡಿಲು ಬಡಿದು ಸಹೋದರರ ದುರ್ಮರಣ