ದಾವಣಗೆರೆ: ಬೆಣ್ಣೇನಗರಿಯಲ್ಲಿ ಬೀಡು ಬಿಟ್ಟಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಬಣದ ಸುಮಾರು 40ಕ್ಕೂ ಹೆಚ್ಷು ಜನ ಮಾಜಿ ಸಚಿವರು, ಶಾಸಕರು ಹಾಗೂ ಹಾಲಿ ಶಾಸಕರು ನಗರದ ಸಾಯಿ ಇಂಟರ್ ನ್ಯಾಷನಲ್ ಹೋಟೆಲ್ ನಲ್ಲಿ ಸೇರಿದ್ದು, ಸಭೆ ಈಗ ಆರಂಭವಾಗಿದೆ.
ಸಭೆ ಆರಂಭದ ಪೂರ್ವದಲ್ಲಿ ನಗರ ದೇವತೆ ಶ್ರೀದುರ್ಗಾಂಬಿಕಾ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ನಂತರ ದೊಡ್ಡಬಾತಿಯ ಶ್ರೀರೇವಣಸಿದ್ದೇಶ್ವರ ದೇವರ ದರ್ಶನ ಪಡೆದರು. ಬಳಿಕ ಮಾಜಿ ಶಾಸಕ ಎಸ್.ವಿ.ರಾಮಚಂದ್ರ ಅವರ ತೋಟದ ಮನೆಯಲ್ಲಿ ಬೆಳಗಿನ ಉಪಾಹಾರ ಸೇವಿಸಿದರು. ಅಲ್ಲಿಂದ ನೇರವಾಗಿ ಬೆಳಗ್ಗೆ 12 ಗಂಟೆಗೆ ಸಾಯಿ ಇಂಟರ್ ನ್ಯಾಷನಲ್ ಹೋಟೆಲ್ ಗೆ ಆಗಮಿಸಿ ಸಭೆಯಲ್ಲಿ ಪಾಲ್ಗೊಂಡಿದ್ದಾರೆ.
ಸಭೆಯಲ್ಲಿ ಎಂಪಿ ರೇಣುಕಾಚಾರ್ಯ, ಎಸ್ ವಿ ರಾಮಚಂದ್ರಪ್ಪ , ವೈ.ಸಂಪಗಿ, ಬ್ಯಾಡಗಿ ವಿರುಪಾಕ್ಷಪ್ಪ, ರಾಣೆಬೆನ್ನೂರು ಅರುಣ್ ಕುಮಾರ್,ಕೊಳ್ಳೆಗಾಲ ಮಹೇಶ್,
ಮಾನ್ವಿ ಗಂಗಾಧರ ನಾಯ್ಕ್, ಶಿವಮೊಗ್ಗ ಕುಮಾರಸ್ವಾಮಿ,
ಸೀಮಾ ಮಸೂತಿ, ಬಸವರಾಜ್ ನಾಯ್ಕ್, ಮೊಳಕಾಲ್ಮುರು ತಿಪ್ಪೇಸ್ವಾಮಿ, ಕಡೂರು ಬೆಳ್ಳಿ ಪ್ರಕಾಶ್, ರಾಜಶೇಖರ್ ಶೀಲವಂತ್, ಮಸ್ಕಿ ಪ್ರತಾಪ್ ಗೌಡ್ರು, ಮೈಸೂರು ನಾಗೇಂದ್ರ,ಗುಂಡ್ಲುಪೇಟೆ ನಿರಂಜನ್, ಜಗದೀಶ್ ಮೇಟಿಗುಡ್ಡ, ಸುರೇಶ್ ಮಾರಿಹಾಳ್, ವಿಶ್ವನಾಥ್ ಪಟೇಲ್, ಕಟ್ಟಾಸುಬ್ರಮಣ್ಯ ನಾಯ್ಡು, ಅಶೋಕ್ ಕಾಟ್ವೇ, ಪ್ರತಾಪ್ ಗೌಡ ಪಾಟೀಲ್, ಹಾರತಾಳ್ ಹಾಲಪ್ಪ, ದೇವನಹಳ್ಳಿ ಚಂದ್ರಪ್ಪ, ದೇವನಹಳ್ಳಿ ಪಿಳ್ಳಮುನಿ ಶ್ಯಾಮಪ್ಪ, ಶಿಡ್ಲಘಟ್ಟ ರಾಜಣ್ಣಗುಂಡಪ್ಪ ವಕೀಲ, ಗುಂಡ್ಲುಪೇಟೆ ನಿರಂಜನ್, ಶಿವರಾಜ್ ಸಜ್ಜನ್, ಹರ್ಷವರ್ಧನ್, ಚಾಮರಾಜನಗರ ಬಾಲರಾಜ್, ಬಳ್ಳಾರಿ ವಿರುಪಾಕ್ಷಪ್ಪ, ಶಿವರಾಜ್ ಸಜ್ಜನ್, ಮಾಜಿ ಎಂಎಲ್ಸಿ ರುದ್ರೇಗೌಡ್ರು, ಮಾರಿಹಾಳ್ ಮಹೇಶ್ ರೆಡ್ಟಿ ಮುದ್ದನಾಳ್, ಎಸ್.ಎ.ರವೀಂದ್ರನಾಥ್, ಎಚ್.ಪಿ.ರಾಜೇಶ್,
ದಡೇಸೂಗೂರು, ಮಾಡಾಳ್ ವಿರುಪಾಕ್ಷಪ್ಪ , ಪರಣ್ಣ ಮುನವಳ್ಳಿ ಹಾಗೂ ತರೀಕೆರೆ ಸುರೇಶ್ ಸೇರಿದಂತೆ ಇನ್ನಿತರರಿದ್ದರು.