ಹಾವು ಕಡಿದು ಅಂಗನವಾಡಿ ಬಾಲಕಿ ಸಾವು

0
34

ಮುಂಡಗೋಡ: ಪಟ್ಟಣದ ಮಾರಿಕಾಂಬಾ ನಗರದ ಅಂಗನವಾಡಿಯಲ್ಲಿ ಕಲಿಯುತ್ತಿದ್ದ ಐದು ವರ್ಷದ ಮಯೂರಿ ಎಂಬ ಬಾಲಕಿ ಹಾವು ಕಡಿತದಿಂದ ಮೃತಪಟ್ಟಿದ್ದಾಳೆ.
ನಗರದಲ್ಲಿನ ಮಾರಿಕಾಂಬಾ ಅಂಗನವಾಡಿಗೆ ತೆರಳಿದ್ದ ಬಾಲಕಿ ಮಯೂರಿ ಸುರೇಶ ಕುಂಬ್ಳೆಪ್ಪನವರ್ (4 ವರ್ಷ) ವಿರಾಮದ ವೇಳೆ ಮೂತ್ರ ವಿರ್ಜನೆಗೆಂದು ತೆರಳಿದ್ದು ಅಲ್ಲಿ ವಿಷ ಜಂತು ಕಚ್ಚಿದೆ. ಬಾಲಕಿಯ ಕಿರುಚಾಟ ಕೇಳಿದ ಅಂಗನವಾಡಿ ಸಿಬ್ಬಂದಿ ಬಾಲಕಿಯನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ತಾಲೂಕಾ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಉಪಚಾರಕ್ಕೆ ಹುಬ್ಬಳ್ಳಿಯ ಕಿಮ್ಸ್‌ಗೆ ದಾಖಲಿಸಲಾಯಿತಾದರು, ಮಯೂರಿ ಕೊನೆ ಉಸಿರೆಳಿದಿದ್ದಾಳೆ.

Previous articleಕಾನೂನಿನ ಉಲ್ಲಂಘನೆ ಮಾಡಿದ ಅಧಿಕಾರಿಗಳ ಮೇಲೆ ಸೂಕ್ತ ಕ್ರಮಕ್ಕೆ ಆಗ್ರಹ
Next articleನೇಣು ಬಿಗಿದುಕೊಂಡು ಜೆಇ ಆತ್ಮಹತ್ಯೆ