ಸಂಬಳ ಕೊಡಲು ಕಾಂಗ್ರೆಸ್ ಸರ್ಕಾರದ ಬಳಿ ದುಡ್ಡಿಲ್ಲ

0
58

ಶಿವಮೊಗ್ಗ: ರಾಜ್ಯದ ಕಾಂಗ್ರೆಸ್ ಸರ್ಕಾರ ಆರ್ಥಿಕವಾಗಿ ಸಂಪೂರ್ಣ ದಿವಾಳಿಯಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.
ಅವರು ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ ರಾಜ್ಯದಲ್ಲಿ ಮಹಾನಗರ ಪಾಲಿಕೆ ನೌಕರರು ಬೀದಿಗಳಿದು ಅನಿರ್ಧಿಷ್ಟಾವಧಿಯ ಹೋರಾಟ ಆರಂಭಿಸಿದ್ದಾರೆ. ಕಳೆದ ನಾಲ್ಕು ತಿಂಗಳಿಂದ ಪಡಿತರ ಸಾಗಣೆ ವಾಹನ ಮಾಲಿಕರಿಗೆ ಬಾಡಿಗೆ ಕೊಡದೆ ಅವರೂ ಮುಷ್ಕರ ಆರಂಭಿಸಿದ್ದಾರೆ. ಅನ್ನ ಭಾಗ್ಯಕ್ಕೆ ಸರ್ಕಾರ ತಾನೇ ಕನ್ನ ಹಾಕುತ್ತಿದೆ ಎಂದು ಕುಟುಕಿದರು.
ಸರ್ಕಾರಿ ನೌಕರರಿಗೆ ಸಂಬಳ ಕೊಡಲೂ ಸರ್ಕಾರದಲ್ಲಿ ದುಡ್ಡಿಲ್ಲ. ಶಾಸಕರ ಪ್ರದೇಶಾಭಿವೃದ್ಧಿಗೂ ಅನುದಾನ ನೀಡಲು ಸರ್ಕಾರದ ಬಳಿ ಹಣವಿಲ್ಲ. ಸರ್ಕಾರ ಆಡಳಿತದ ಮೇಲೆ ಸಂಪೂರ್ಣ ಹಿಡಿತ ಕಳೆದುಕೊಂಡಿದೆ ಎಂದು ಸರ್ಕಾರವನ್ನು ಜರಿದರು. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕಾಲ್ತುಳಿತಕ್ಕೆ ಸಂಬಂಧಿಸಿದಂತೆ, ಕಾಂಗ್ರೆಸ್ ಸರ್ಕಾರ ಪ್ರತಿಷ್ಠೆ, ಪುಕ್ಕಟೆ ಪ್ರಚಾರಕ್ಕೆ ಹಠಕ್ಕೆ ಬಿದ್ದು ಕಾರ್ಯಕ್ರಮ ಅಸಯೋಜಿಸಿ, ಈಗ ಸತ್ಯವನ್ನು ಮರೆ ಮಾಚುತ್ತಿದೆ ಎಂದು ದೂರಿದರು.

Previous articleಸೈಟು ಕೇಳಿಕೊಂಡು ಬಂದ ಚಿನ್ನದ ಸರ ಕದ್ದ!
Next articleSK IMPACT: ಆಧಾರ್ ಕೇಂದ್ರ ಮರು ಪ್ರಾರಂಭ