ವಿಮಾನದಲ್ಲಿಯೇ ಹೃದಯಾಘಾತ ಡಾಟಾ ಇರ್ಷಾದ್ ಇನ್ನಿಲ್ಲ

0
15

ಭಟ್ಕಳ: ಜಾಲಿ ಪಟ್ಟಣ ಪಂಚಾಯಿತಿ ಮಾಜಿ ಸದಸ್ಯ, ಸಮಾಜ ಸೇವಕ ಡಾಟಾ ಇರ್ಷಾದ್ ಎಂತಲೇ ಕರೆಯಿಸಿಕೊಳ್ಳುತ್ತಿದ್ದ ಕಾರ್ಗದ್ದೆ ನಿವಾಸಿ ಇರ್ಷಾದ್ ಇಕ್ಕೇರಿ(೬೭) ಅವರು ದುಬೈಗೆ ಪ್ರಯಾಣ ಬೆಳೆಸಿರುವಾಗ ವಿಮಾನದಲ್ಲಿಯೇ ತೀವ್ರ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ತಮ್ಮ ಪತ್ನಿ ಹಾಗೂ ಮಗಳೊಂದಿಗೆ ತಡರಾತ್ರಿ ಮಂಗಳೂರು-ಅಬುದಾಬಿ ವಿಮಾನದಲ್ಲಿ ದುಬೈಗೆ ಪ್ರಯಾಣ ಬೆಳೆಸಿದ್ದರು. ಆ ಸಂದರ್ಭದಲ್ಲಿ ತೀವ್ರ ಹೃದಯಾಘಾತಕ್ಕೆ ಒಳಗಾಗಿದ್ದರಿಂದ ಮಸ್ಕತ್ ವಿಮಾನ ನಿಲ್ದಾಣದಲ್ಲಿ ವಿಮಾನ ತುರ್ತು ಭೂಸ್ಪರ್ಶ ಮಾಡಿ, ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವುದರಲ್ಲಿ ಮೃತಪಟ್ಟಿರುವುದಾಗಿ ಘೋಷಿಸಲಾಗಿದೆ ಎನ್ನಲಾಗಿದೆ. ಮೃತದೇಹವನ್ನು ಮಸ್ಕತ್‌ನಲ್ಲಿನ ಆಸ್ಪತ್ರೆಯಲ್ಲಿ ಇಡಲಾಗಿದೆ. ಅವರಿಗೆ ಪತ್ನಿ, ಮೂವರು ಪುತ್ರಿಯರಿದ್ದಾರೆ.

Previous articleಮೇಣಬಸದಿ ಬಳಿ ಮಡಿಕೆ, ನಾಣ್ಯ ಪತ್ತೆ..!
Next articleಕುಡಿದ ಮತ್ತಿನಲ್ಲಿ ದೇವಾಲಯಕ್ಕೆ ಕಲ್ಲು