ವಿದೇಶೀಯರ ಮುಂದೆ ಬಿಜೆಪಿ, ಆರೆಸ್ಸೆಸ್ ತಲೆಬಾಗುತ್ತವೆ

0
23
ರಾಹುಲ್‌ ಗಾಂಧಿ

ನವದೆಹಲಿ: ಬಿಜೆಪಿ ಹಾಗೂ ಆರೆಸ್ಸೆಸ್-ಈ ಎರಡೂ ಸಂಘಟನೆಗಳು ದೇಶಕ್ಕೆ ಬರುವ ಎಲ್ಲಾ ವಿದೇಶೀಯರ ಮುಂದೆ ತಲೆಬಾಗುತ್ತವೆ ಎಂದು ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ದೂಷಿಸಿದ್ದಾರೆ. ಇದೇ ವೇಳೆ ಚೀನಾ ವಶಪಡಿಸಿಕೊಂಡಿರುವ ಭೂಮಿ ಮರಳಿ ಪಡೆಯಲು ಮೋದಿ ಸರ್ಕಾರ ಏನು ಮಾಡುತ್ತಿದೆ? ಮಿತ್ರ ದೇಶವಾದ ಅಮೆರಿಕವು ಭಾರತ ಮೇಲೆ ವಿಧಿಸಿರುವ ಶೇ. ೨೬ರ ಸುಂಕ ಕುರಿತು ಲೋಕಸಭೆಗೆ ವಿವರಿಸಬೇಕೆಂದೂ ಒತ್ತಾಯಿಸಿದ್ದಾರೆ. ಚೀನಾವು ಭಾರತದ ನಾಲ್ಕು ಸಾವಿರ ಚದರ ಕಿ.ಮೀ ಭೂಭಾಗವನ್ನು ಅತಿಕ್ರಮಿಸಿದ್ದು ಎಲ್ಲರಿಗೂ ತಿಳಿದಿರುವ ವಿಚಾರ. ಆದರೂ ವಿದೇಶಾಂಗ ಕಾರ್ಯದರ್ಶಿಯವರು ಚೀನಾದ ರಾಯಭಾರಿ ಜೊತೆ ಕೇಕ್ ಕತ್ತರಿಸುತ್ತಿರುವುದನ್ನು ನೋಡಿ ನನಗೆ ಆಘಾತವಾಯಿತು ಎಂದು ಸದನದ ಶೂನ್ಯ ವೇಳೆಯಲ್ಲಿ ಹೇಳಿದರು.

Previous articleಬಾವಿ ಸ್ವಚ್ಛಕ್ಕೆ ಇಳಿದಿದ್ದ 8 ಜನರು ಉಸಿರುಗಟ್ಟಿ ಸಾವು
Next articleವಕ್ಫ್ ತಿದ್ದುಪಡಿ ಬಡವರಿಗೆ ವರದಾನ