ರಾಮ ಮಂದಿರ ಸ್ಫೋಟಿಸುವುದಾಗಿ ಬೆದರಿಕೆ ಪತ್ರ

0
33

ಚಿಕ್ಕೋಡಿ: ರಾಮ ಮಂದಿರ ಸ್ಪೋಟಿಸುತ್ತೇವೆ, ಸುಧಾರಿಸಿಕೊಳ್ಳಿ ಎಂಬ ಬೆದರಿಕೆ ಪತ್ರ ಸಂಚಲನ ಮೂಡಿಸಿದೆ.
ನಿಪ್ಪಾಣಿ ಪಟ್ಟಣದ ಶ್ರೀರಾಮ ಮಂದಿರವನ್ನು ಸ್ಫೋಟಿಸುತ್ತೇವೆ, ಎಂದು ಅಲ್ಲಾ ಹು ಅಕ್ಬರ್ ಹೆಸರಿನಲ್ಲಿ ಬೆದರಿಕೆ ಪತ್ರವನ್ನು ಅನಾಮಧೇಯ ವ್ಯಕ್ತಿಗಳು ಬಿಟ್ಟುಹೋಗಿದ್ದಾರೆ, ಕಳೆದ ಫೆ 7 ಹಾಗೂ 28 ೨೦೨೪ ರಂದು ಬೆದರಿಕೆ ಪತ್ರಗಳು ಕಂಡು ಬಂದಿವೆ. ಪತ್ರದಲ್ಲಿ ಮುಂದಿನ ೨೦, ೨೧ ತಾರೀಖು ಒಳಗಡೆ ಸ್ಪೋಟಿಸುತ್ತೇವೆ ಎಂದು ಅನಾಮಧೇಯ ವ್ಯಕ್ತಿಗಳು ಪತ್ರ ಬರೆದಿದ್ದಾರೆ. 101 ವರ್ಷಗಳ ಇತಿಹಾಸ ಹೊಂದಿದ ನಿಪ್ಪಾಣಿ ಶ್ರೀ ರಾಮ ಮಂದಿರದಲ್ಲಿ ಮೊದಲನೆಯ ಪತ್ರ ರಾಮ ಮಂದಿರ ಗರ್ಭ ಗುಡಿಯಲ್ಲಿ ಪತ್ತೆಯಾಗಿದ್ದು,ಎರಡೆನೇಯ ಪತ್ರ ಮಂದಿರದ ಆವರಣದ ಹನುಮಾನ ಮಂದಿರದಲ್ಲಿ ಪತ್ತೆಯಾಗಿದೆ, ಬೆದರಿಕೆ ಪತ್ರ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲಾ ಪೋಲಿಸ್ ಹೈ ಅಲರ್ಟ್ ಘೋಷಿಸಿದ್ದು, ಮಂದಿರದ ಆವರಣದಲ್ಲಿ 14 ಸಿಸಿಟಿವಿಗಳನ್ನು ಅಳವಡಿಸಿಲಾಗಿದೆ. ನಿಪ್ಪಾಣಿ ಶಹರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Previous articleನಮ್ಮವರು ವಿರೋಧ ಮಾಡಿದ ಕಾರಣಕ್ಕೆ ನನಗೆ ಅನುಕೂಲ
Next articleಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಬಂಡವಾಳ ಹೂಡಿಕೆ