ಮತ್ತೊಬ್ಬ ಮಗನನ್ನು ಹೆತ್ತ ಮೂಸೆವಾಲಾನ ತಾಯಿ

0
29

ಚಂಡೀಗಢ: ಹತ್ಯೆಗೀಡಾದ ಪಂಜಾಬಿ ಗಾಯಕ ಸಿಧು ಮೂಸೆವಾಲಾ ಅವರ ತಾಯಿ ಚರಣ್ ಕೌರ್ ತಮ್ಮ ೫೮ನೇ ವಯಸ್ಸಿನಲ್ಲಿ ಮತ್ತೊಬ್ಬ ಮಗನಿಗೆ ಜನ್ಮ ನೀಡಿದ್ದಾರೆ. ಐವಿಎಫ್ ತಂತ್ರಜ್ಞಾನ ಮೂಲಕ ಚರಣ್ ಕೌರ್ ಹಾಗೂ ಬಲ್ಕೌರ್ ಸಿಂಗ್ ದಂಪತಿ ಈ ಮಗುವನ್ನು ಪಡೆದಿದ್ದಾರೆ. ಬಟಿಂಡಾದ ಸರ್ಕಾರಿ ಆಸ್ಪತ್ರೆಯಲ್ಲಿ ಭಾನುವಾರ ಮುಂಜಾನೆ ೫.೫೮ರ ಸಮಯದಲ್ಲಿ ಮಗುವಿನ ಜನನವಾಗಿದೆ. ೨೦೨೨ರ ಮೇ ೨೯ರಂದು ಸಿಧು ಮೂಸೆವಾಲಾ ಹತ್ಯೆಗೀಡಾದ ನಂತರ ಈ ದಂಪತಿ ಕಂಗಾಲಾಗಿದ್ದರು. ಮಗನ ಸಾವಿನಿಂದ ಒಂಟಿತನ ಕಳೆಯಲು ಚರಣ್ ಕೌರ್ ಮತ್ತೊಂದು ಮಗು ಹೆರಲು ಮುಂದಾದರು. ಇದೀಗ ಈ ಪುಟ್ಟ ರಾಜಕುಮಾರನ ಆಗಮನದಿಂದ ಪಂಜಾಬಿನಲ್ಲಿ ಸಂಭ್ರಮದ ವಾತಾವರಣ ಕಂಡುಬಂದಿದೆ. ರಾಜಕೀಯ ಸೇರಿದಂತೆ ಸಾಮಾಜಿಕ ವಲಯದ ಎಲ್ಲ ಗಣ್ಯರು ಈ ಕುಟುಂಬಕ್ಕೆ ಶುಭಹಾರೈಸಿದ್ದಾರೆ.

Previous articleಈರುಳ್ಳಿ ದರ ಕುಸಿತ: ರೈತರ ಕಣ್ಣಲ್ಲಿ ನೀರು
Next articleಗ್ರಾಹಕರಿಗೆ ಮಾನಸಿಕ ಕಿರುಕುಳ ಫ್ಲಿಪ್‌ಕಾರ್ಟ್‌ಗೆ ೧೦ ಸಾವಿರ ದಂಡ