ಬರಿ ಸುಳ್ಳು ಮಾಹಿತಿ: ನಿರ್ಮಲಾ

0
15

ನವದೆಹಲಿ: ಕರ್ನಾಟಕ ಸರ್ಕಾರ ಸುಳ್ಳು ಮಾಹಿತಿಯನ್ನು ಹರಡುತ್ತಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಆರೋಪಿಸಿದ್ದಾರೆ. ಕಾಂಗ್ರೆಸ್ ನೇತೃತ್ವದ
ಸರ್ಕಾರ ಪ್ರತ್ಯೇಕತಾವಾದಿ ಮನೋಭಾವ ಹೊಂದಿದ್ದು, ಕೇಂದ್ರ ಸರ್ಕಾರ ತಾರತಮ್ಯ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿದ್ದಾರೆ.
ರಾಜ್ಯಕ್ಕೆ ಅನ್ಯಾಯ ಮಾಡಲಾಗುತ್ತಿದೆ ಎಂದು ಆರೋಪಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಶಾಸಕರು ದೆಹಲಿಯಲ್ಲಿ ನಡೆಸಿದ ಪ್ರತಿಭಟನೆ ಹಿನ್ನೆಲೆಯಲ್ಲಿ ನಿರ್ಮಲಾ ಸೀತಾರಾಮನ್ ಪ್ರತ್ಯಾರೋಪ ಮಾಡಿದ್ದಾರೆ. ಕರ್ನಾಟಕ ಸರ್ಕಾರದಿಂದ ಈ ಕುರಿತು ನೀಡಲಾಗಿರುವ ಜಾಹೀರಾತನ್ನು ಉಲ್ಲೇಖಿಸಿ, ಅಲ್ಲಿ ಬಳಸಿರುವ ಭಾಷೆ ಕಾಂಗ್ರೆಸ್‌ನ ತುಕ್ಡೆ ತುಕ್ಡೆ ಮನೋಭಾವವನ್ನು ಇದು ಬಿಂಬಿಸುತ್ತದೆ ಎಂದಿದ್ದಾರೆ.

Previous articleಸ್ವಚ್ಛತೆ: ಶ್ರದ್ಧೆ-ಸೇವೆಯ ನಡುವೆ ತಾಕಲಾಟ
Next articleಅಯೋಧ್ಯೆಯ ರಾಮನಿಗೆ ರಜತ ಪಲ್ಲಕ್ಕಿ, ಕಾಷ್ಠ ತೊಟ್ಟಿಲು ಅರ್ಪಣೆ