ಪಿಎಸ್ಐ ಸಾವು ಪ್ರಕರಣ: ಯಾದಗಿರಿಗೆ ಸಿಐಡಿ ತಂಡ ಭೇಟಿ

0
15

ಯಾದಗಿರಿ: ಪಿಎಸ್ಐ ಪರಶುರಾಮ್ ಅವರ ಅನುಮಾನಾಸ್ಪದ ಸಾವು ಪ್ರಕರಣದ ತನಿಖೆ ಮಾಡಲು ಸಿಐಡಿ ಅಧಿಕಾರಿಗಳ ತಂಡ ಇಂದು ಯಾದಗಿರಿಗೆ ಭೇಟಿ ನೀಡಿದೆ.
ಪಿಎಸ್ಐ ಪರಶುರಾಮ್ ಅವರ ಸಾವಿಗೆ ಸಂಬಂಧ ಶನಿವಾರ ರಾಜ್ಯ ಹೆದ್ದಾರಿ ತಡೆದು ಬೃಹತ್ ಪ್ರತಿಭಟನೆ ನಡೆಸಲಾಗಿತ್ತು. ಪ್ರತಿಭಟನೆ ಗಂಭೀರತೆ ಪಡೆದ ಕಾರಣಕ್ಕೆ ಶಾಸಕ ಚೆನ್ನಾರಡ್ಡಿ ಪಾಟೀಲ್ ತುನ್ನೂರು ಹಾಗೂ ಅವರ ಪುತ್ರ ಸನ್ನಿಗೌಡ ತುನ್ನೂರು ಅವರ ವಿರುದ್ಧ ಎಫ್ಐಆರ್ ಅಗಿತ್ತು. ಮೃತ ಪಿಎಸ್ಐ ಪತ್ನಿ ನೀಡಿದ ದೂರಿನ ಮೇರೆಗೆ ಯಾದಗಿರಿ ನಗರ ಠಾಣೆಯಲ್ಲಿ ಮಧ್ಯಾಹ್ನ ಪ್ರಕರಣ ದಾಖಲಾಗಿತ್ತು. ಬಳಿಕ ಪ್ರಕರಣವನ್ನು ರಾಜ್ಯ ಸರಕಾರ ಸಿಐಡಿ ತನಿಖೆಗೆ ವಹಿಸಿತ್ತು.
ಸಿಐಡಿ ತಂಡ ಇಂದು ಯಾದಗಿರಿಗೆ ಆಗಮಿಸಿದ್ದು ಡಿಸಿಪಿ ಕಚೇರಿಗೆ ಭೇಟಿ ನೀಡಿದೆ. ಕಳೆದ ಮೂರು ಗಂಟೆಗಳಿಂದ ಪ್ರಕರಣದ ಬಗ್ಗೆ ಮಾಹಿತಿ ಕಲೆಹಾಕುತ್ತಿದೆ.

Previous articleಜಮೀನಿಗೆ ನುಗ್ಗಿದ ಬಸ್: 15 ಜನರಿಗೆ ಗಾಯ
Next articleಪೊಲೀಸ್‌ ಠಾಣೆಗಳನ್ನು ಹರಾಜಿಗಿಟ್ಟಿದ್ದಾರೆ