ನಟಿ ಕರಿಷ್ಮಾ ಕಪೂರ್ ಮಾಜಿ ಪತಿ ಸಂಜಯ್ ಕಪೂರ್ ಹೃದಯಾಘಾತದಿಂದ ನಿಧನ

0
34

ನವದೆಹಲಿ: ಬಾಲಿವುಡ್‌ ನಟಿ ಕರಿಷ್ಮಾ ಕಪೂರ್ ಅವರ ಮಾಜಿ ಪತಿ, ಕೈಗಾರಿಕೋದ್ಯಮಿ ಸಂಜಯ್ ಕಪೂರ್ ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ.
ನಿನ್ನೆ ಅಹಮದಾಬಾದ್‌ನಲ್ಲಿ ನಡೆದ ಏರ್‌ ಇಂಡಿಯಾ ವಿಮಾನ ಅಪಘಾತ ಕುರಿತಂತೆ ಸಂಜಯ್ ಟ್ವೀಟ್ ಮಾಡಿ ಸಂತಾಪ ಕೋರಿದ್ದರು. ಅದಾದ ಕೆಲವೇ ಗಂಟೆಗಳಲ್ಲಿ ಅವರಿಗೆ ಹೃದಯಾಘಾತ ಆಗಿದೆ. ಸಂಜಯ್ ಬಾಲಿವುಡ್ ನಟಿ ಕರಿಷ್ಮಾ ಅವರನ್ನು 2003 ರಲ್ಲಿ ವಿವಾಹವಾದರು. 2016 ರಲ್ಲಿ ವಿಚ್ಛೇದನ ಪಡೆದರು. ಅವರಿಗೆ ಮಗಳು ಸಮೈರಾ ಮತ್ತು ಮಗ ಕಿಯಾನ್ ಇದ್ದಾರೆ. ಇಬ್ಬರೂ ಮಕ್ಕಳು ಕರಿಷ್ಮಾ ಅವರ ಜೊತೆಗಿದ್ದಾರೆ. ಸಂಜಯ್ ನ್ಯೂಯಾರ್ಕ್‌ನಲ್ಲಿ ಭೇಟಿಯಾದ ಪ್ರಿಯಾ ಸಚ್‌ದೇವ್ ಅವರನ್ನು ಪ್ರೀತಿಸುತ್ತಿದ್ದರು. ಐದು ವರ್ಷಗಳ ಡೇಟಿಂಗ್ ನಂತರ, ಅವರು ದೆಹಲಿಯಲ್ಲಿ ವಿವಾಹವಾದರು. ದಂಪತಿಗೆ ಅಜಾರಿಯಾಸ್ ಕಪೂರ್ ಎಂಬ ಮಗನಿದ್ದಾನೆ.

Previous articleಸಂಕ ಕಲಬುರಗಿ ಆವೃತ್ತಿಗೆ ರಜತ ಸಂಭ್ರಮ: ಕಲ್ಯಾಣ ಸಿರಿಗೆ ಗಣ್ಯರಿಂದ ವಿದ್ಯುಕ್ತ ಚಾಲನೆ
Next articleಕೋಮು ಗಲಭೆ ನಿಯಂತ್ರಣ ವಿಶೇಷ ಕಾರ್ಯಪಡೆ ಘಟಕಕ್ಕೆ ಚಾಲನೆ