ದಾಂಡೇಲಿ ನಗರಸಭೆಯ ಕಛೇರಿ ಕೆಲಸಗಳಿಗೆ ನಾಗರಿಕರ ಪರದಾಟ

0
24

ದಾಂಡೇಲಿ: ಇಲ್ಲಿಯ ನಗರಸಭಾ ಕಚೇರಿಯಲ್ಲಿ ಜನಸಾಮಾನ್ಯರು ತಮ್ಮ ಕೆಲಸಗಳಿಗಾಗಿ ಹೋದರೆ ಕಚೇರಿ ವೇಳೆಯಲ್ಲಿ ಸಿಬ್ಬಂದಿಗಳೇ ಇರುವುದಿಲ್ಲ ಎಂದು ನಾಗರಿಕರು ದೂರುತ್ತಿದ್ದಾರೆ.
ನಗರಸಭೆಯ ತೆರಿಗೆ, ನೀರು ಸರಬರಾಜು, ಆರೋಗ್ಯ ಹಾಗೂ ಇನ್ನಿತರ ವಿಭಾಗಗಳಿಗೆ ಬರುವ ಜನರು ವಾರಗಟ್ಟಳೆ ಕಚೇರಿಗೆ ಅಲೆಯುವಂತಾಗಿದೆಯೆಂದು ನಾಗರಿಕರು ಬೇಸರ ಹೊರ ಹಾಕಿದ ಘಟನೆ ಜರುಗಿದೆ. ಈ ಕುರಿತು ನಗರಸಭೆಯ ಅಧಿಕೃತ ವೆಬ್ ಸೈಟಿನ ಗೂಗಲ್ ರಿವ್ಯೂನಲ್ಲಿ ಅಸಮಧಾನ ವ್ಯಕ್ತಗೊಂಡಿದೆ. ಹಣ ಕೊಡದೆ ಯಾವುದೇ ಸಿಬ್ಬಂಧಿಗಳು ಕೆಲಸ ಮಾಡುವುದಿಲ್ಲ. ಮೂರ್ನಾಲ್ಕು ತಿಂಗಳ ಹಿಂದೆ ನೂತನವಾಗಿ ಬಂದಿರುವ ಆಯುಕ್ತರು ಆಡಳಿತ ಸುಧಾರಕ ಕ್ರಮ ಜರುಗಿಸಲು ಪ್ರಯತ್ನಿಸಿದರೂ ಹಲವು ವರ್ಷಗಳಿಂದ ಬೇರು ಬಿಟ್ಟಿರುವ ಕೆಲ ಸಿಬ್ಬಂಧಿಗಳು ಪ್ರಮುಖ ವಿಭಾಗಗಳಲ್ಲಿದ್ದು ಅವರ ಆದೇಶವನ್ನು ನಿರ್ಲಕ್ಷಿಸಿ ವಸೂಲಿ ದಂಧೆಯಲ್ಲೆ ನಿರತರಾಗಿದ್ದಾರೆಂದು ಹೇಳಲಾಗುತ್ತಿದೆ. ಜಿಲ್ಲಾಡಳಿತ ಈ ಸಿಬ್ಬಂದಿಗಳನ್ನು ಕಚೇರಿ ವೇಳೆ ಸಾರ್ವಜನಿಕರಿಗೆ ಲಭ್ಯರಾಗುವಂತೆ ಮಾಡಿ ಕೆಲಸ ಮಾಡುವಂತೆ ಕ್ರಮ ವಹಿಸಬೇಕೆಂಬುದು ನಾಗರಿಕರ ಆಗ್ರಹವಾಗಿದೆ.

Previous articleಆಲಮಟ್ಟಿ ಜಲಾಶಯದ ಎಲ್ಲ 26 ಗೇಟ್ ಓಪನ್
Next articleನಾರಾಯಣಪುರ ಜಲಾಶಯದಿಂದ ಹೆಚ್ಚುವರಿ ನೀರು ನದಿಗೆ ಬಿಡುಗಡೆ: ನದಿಪಾತ್ರದ ಜನರಿಗೆ ಎಚ್ಚರಿಕೆ