ಡಿಕೆ ಶಿವಕುಮಾರ್‌ ಹೆಸರನ್ನು ಡಿಕೆ ಶರೀಫ್ ಮಾಡಿಕೊಳ್ಳಿ…

0
24

ಸ್ವಾತಂತ್ರ್ಯ ಬಂದು 75 ವರ್ಷವಾಯಿತು ಬದಲಾವಣೆ ಮಾಡುವುದಾದರೆ ವಿಕ್ಟೋರಿಯಾ ಆಸ್ಪತ್ರೆ, ಸೇರಿದಂತೆ 32 ಕಡೆ ಬ್ರಿಟಿಷರ ಹೆಸರುಗಳನ್ನು ಬದಲಾವಣೆ ಮಾಡಿ

ಗದಗ: ರಾಮನಗರಕ್ಕೆ ತನ್ನದೆ ಆದ ಇತಿಹಾಸ ಇದೆ. ಅದ್ಯಾಕೆ ಬದಲಾವಣೆ ಮಾಡುತ್ತೀರಿ ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಪ್ರಶ್ನಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕಾಂಗ್ರೆಸ್‌ನವರು 47 ರಿಂದ ಇನ್ನೆ ಮಾಡುತ್ತಾ ಬಂದಿದೆ, ಸ್ವಾತಂತ್ರ್ಯ ಬಂದು 75 ವರ್ಷವಾಯಿತು ಬದಲಾವಣೆ ಮಾಡುವುದು ಆದರೆ ವಿಕ್ಟೋರಿಯಾ ಆಸ್ಪತ್ರೆ, ಚರ್ಚ್ ರೋಡ್, ಕಬ್ಬನ್ ಪಾರ್ಕ್, ಸೇರಿದಂತೆ 32 ಕಡೆ ಬ್ರಿಟಿಷರ ಹೆಸರುಗಳನ್ನು ಬದಲಾವಣೆ ಮಾಡಿ. ಡಿಕೆ ಶಿವಕುಮಾರ ಇರುವುದನ್ನು ಡಿಕೆ ಶರೀಫ್ ಮಾಡಿಕೊಳ್ಳಿ. ರಾಮನಗರಕ್ಕೆ ತನ್ನದೆ ಆದ ಇತಿಹಾಸ ಇದೆ. ಅದ್ಯಾಕೆ ಬದಲಾವಣೆ ಮಾಡುತ್ತೀರಿ. ರಾಮನಗರ ಹೆಸರು ಪರಿವರ್ತನೆ ಮಾಡಿದರೆ ರಾಜ್ಯಾದ್ಯಂತ ಉಗ್ರವಾದ ಹೋರಾಟ ಮಾಡುತ್ತೇವೆ. ರಾಮನಗರ ಹೆಸರು ಬದಲಾವಣೆ ವಾಪಸ್‌ ಪಡೆಯುವವರಿಗೆ ನಮ್ಮ ಹೊರಾಟ ಸಾಗಲಿದೆ ಎಂದು ಎಚ್ಚರಿಸಿದ್ದಾರೆ.

ಬೆಂಗಳೂರು ನಾಯಿ ಮಾಂಸ ಪ್ರಕರಣ ಕುರಿತಂತೆ ಮಾತನಾಡಿ: ರಾಜಸ್ಥಾನ ಜೈಪುರದಿಂದ ಬೆಂಗಳೂರಿಗೆ ಕಳೆದ 15 ವರ್ಷದಿಂದ ಸರಬರಾಜಾಗುತ್ತಿದೆ. ಕಳೆದ 15 ವರ್ಷದಿಂದ ನಾಯಿ ಮಾಂಸ ತಿನ್ನಿಸುತ್ತಿದ್ದಾನೆ. ಬೆಂಗಳೂರು ದೊಡ್ಡ ದೊಡ್ಡ ಸ್ಟಾರ್ ಹೊಟೆಲ್‌ಗಳಿಎ ಮಾರಾಟಾ ಮಾಡುತ್ತಾ ಬಂದಿದ್ದಾರೆ. ಆಹಾರ ಇಲಾಖೆ, ಬಿಬಿಎಂಪಿ ಅಧಿಕಾರಿಗಳು ಕತ್ತೆ ಕಾಯುತ್ತಿದ್ದಾರಾ? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆಹಾರ ಇಲಾಖೆ, ಬಿಬಿಎಂ ಅಧಿಕಾರಿಗಳನ್ನು ಅಮಾನತು ಮಾಡಬೇಕು. ಹಲಾಲ್ ಮಾಂಸ ತಿನ್ನಬೇಡಿ ಎಂದರೂ ಜನ ತಿನ್ನುತ್ತಿದ್ದಾರೆ. ಜೈಪುರದಿಂದ ಬೆಂಗಳೂರಿಗೆ ಬರಬೇಕಾದರೆ 3 ದಿನ ಬೇಕಾಗುತ್ತೆ, ಆದರೆ ಮೌಂಸ 12 ಗಂಟೆ ನಂತರ ವಿಷಕಾರವಾಗುತ್ತದೆ, ಅದರ ಗುಣಮಟ್ಟ ಏನಾಗುತ್ತೆ? ಅಬ್ದುಲ್ ರಜಾಕ್‌ನನ್ನು ಬಂಧಿಸಬೇಕು ಕಠಿಣ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿದರು.

Previous articleಅಮೆರಿಕ ಅಧ್ಯಕ್ಷೀಯ ಚುನಾವಣೆ ಕಣಕ್ಕೆ ಕಮಲಾ ಹ್ಯಾರಿಸ್
Next articleಅನ್ನ ಯೋಜನೆಯಿಂದ 80 ಕೋಟಿಗೂ ಹೆಚ್ಚು ಜನರಿಗೆ ಪ್ರಯೋಜನ