ಜೇಮ್ಸ್ ಬಾಂಡ್ ಹಾಡಿಗೆ ಚಂದನ್ ದನಿ

0
28

ನಟ ಗುರುನಂದನ್ ಅಭಿನಯದ ರಾಜು ಜೇಮ್ಸ್ ಬಾಂಡ್ ಚಿತ್ರದ ಬಾಂಡ್‌ ಗೀತೆ ಇಂದು ಬಿಡುಗಡೆಯಾಗಿದೆ.
A2 ಮ್ಯೂಸಿಕ್ ಚಾನಲ್‌ ನಲ್ಲಿ ಬಿಡುಗಡೆಯಾಗಿರುವ ಈ ಗೀತೆಗೆ ಜ್ಯೋತಿ ವ್ಯಾಸರಾಜ್ ಬರೆದಿರುವ ಹಾಡಿಗೆ ಅನೂಪ್ ಸೀಳಿನ್ ಸಂಗೀತವಿದ್ದು, ಈ ಹಾಡನ್ನು ಖ್ಯಾತ ಗಾಯಕ ಚಂದನ್‌ ಶೆಟ್ಟಿ ಮತ್ತು ಗಾಯಕಿ ಸಾನ್ವಿ ಶೆಟ್ಟಿ ಹಾಡಿದ್ದಾರೆ, ಇನ್ನುಳಿದಂತೆ ಈ ಚಿತ್ರದ ಮೂಲಕವೂ ಫಸ್ಟ್ ರ‍್ಯಾಂಕ್ ರಾಜು ಖ್ಯಾತಿಯ ರಾಜು (ಗುರುನಂದನ್) ಹೊಸ ರೀತಿಯಿಂದಲೇ ಜನರ ಗಮನ ಸೆಳೆಯಲು ಸಜ್ಜಾಗಿದ್ದಾರೆ. ಚಿತ್ರದಲ್ಲಿ ಗುರುನಂದನ್, ಮೃದುಲಾ, ಸಾಧು ಕೋಕಿಲ, ಅಚ್ಯುತ್ ಕುಮಾರ್, ಚಿಕ್ಕಣ್ಣ, ರವಿಶಂಕರ್, ಜೈ ಜಗದೀಶ್ ಅಭಿನಯಿಸಿದ್ದಾರೆ. ಕರ್ಮ ಬ್ರೋಸ್ ಪ್ರೊಡಕ್ಷನ್ಸ್ ನಿರ್ಮಾಣದ ಹಾಗೂ ದೀಪಕ್ ಮಧುವನಹಳ್ಳಿ ನಿರ್ದೇಶನದಲ್ಲಿ “ರಾಜು ಜೇಮ್ಸ್ ಬಾಂಡ್ ” ಚಿತ್ರದ ಬಿಡುಗಡೆ ದಿನಾಂಕ ಹೊಸವರ್ಷದ ಮೊದಲ ದಿನದಂದು ಘೋಷಣೆಯಾಗಿದೆ. ನಗುವೇ ಪ್ರಾಧಾನವಾಗಿರುವ ಈ ಚಿತ್ರ ಫೆಬ್ರವರಿ 14, ಪ್ರೇಮಿಗಳ ದಿನದಂದು ಕನ್ನಡ ಹಾಗೂ ಹಿಂದಿ ಭಾಷೆಗಳಲ್ಲಿ ಏಕಕಾಲಕ್ಕೆ ಅದ್ದೂರಿಯಾಗಿ ಬಿಡುಗಡೆಯಾಗಲಿದೆ.

Previous articleಜಿಲ್ಲಾ ಆಸ್ಪತ್ರೆ ಮಕ್ಕಳ ತಜ್ಞ ಕಿಡ್ನಾಪ್: 3 ಕೋಟಿಗೆ ಬೇಡಿಕೆ
Next articleಕ್ರೇನ್ ಚಾಲಕ – ಪೌರ ಕಾರ್ಮಿಕರ ನಡುವೆ ಜಟಾಪಟಿ