ಜಾರಕಿಹೊಳಿ ಕಾಂಗ್ರೆಸ್ಸಿಗರೇ ಬಗೆಹರಿಸಿಕೊಳ್ಳಲಿ: ಎಚ್‌ಡಿಕೆ

0
25

ಕೊಪ್ಪಳ: ರಮೇಶ ಜಾರಕಿಹೊಳಿ ಕಾಂಗ್ರೆಸ್ಸಿನಲ್ಲಿ ಇದ್ದವರೇ. ಡಿ.ಕೆ. ಶಿವಕುಮಾರ ಕುರಿತು ಆಡಿಯೋ ಸಿಡಿ ವಿಚಾರವನ್ನು ಎಲ್ಲರೂ ಸೇರಿ ಚರ್ಚಿಸಿ, ಬಗೆಹರಿಸಿಕೊಳ್ಳಲಿ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದರು.
ಕುಷ್ಟಗಿಯಲ್ಲಿ ಪಂಚರತ್ನಯಾತ್ರೆ ಸಮಾವೇಶದ ಬಳಿಕ ಅವರು ಮಾತನಾಡಿ, ಕುಟುಂಬ ರಾಜಕಾರಣ ಎಲ್ಲ ಪಕ್ಷದಲ್ಲಿಯೂ ಇದೆ. ಕುಟುಂಬ ರಾಜಕಾರಣದ ಬಗ್ಗೆ ಮಾತನಾಡುವ ನೈತಿಕತೆ ಬಿಜೆಪಿಯ ಅಮಿತ್ ಷಾಗೆ ಇಲ್ಲ. ಅಧಿಕಾರಿಗಳ ಮಕ್ಕಳು ಅಧಿಕಾರಿಗಳಾಗುತ್ತಾರೆ. ವೈದ್ಯರ ಮಕ್ಕಳ ವೈದ್ಯರಾಗುತ್ತಾರೆ. ಅದೇ ರೀತಿ ರಾಜಕಾರಣಿಗಳ ಮಕ್ಕಳ ರಾಜಕಾರಣಿಗಳಾಗುತ್ತಾರೆ. ಆಯಾ ವ್ಯಕ್ತಿಗಳಿಗೆ ಬಿಟ್ಟ ವಿಚಾರವಾಗಿದೆ. ಬಿಜೆಪಿಯಲ್ಲಿಯೇ ಕುಟುಂಬ ರಾಜಕಾರಣ ಹೆಚ್ಚಿದೆ ಎಂದು ಅಮಿತ್ ಷಾ ಹೇಳಿಕೆಗೆ ತಿರುಗೇಟು ನೀಡಿದರು.
ಉತ್ತರ ಕರ್ನಾಟಕ ಭಾಗದಲ್ಲಿ ಜೆಡಿಎಸ್ ಪಕ್ಷದಿಂದ ಮಾಡಿದ ಪಂಚರತ್ನಯಾತ್ರೆಯನ್ನು ಎರಡು ಪಕ್ಷಗಳು ಅರಗಿಸಿಕೊಳ್ಳಿ. ಪ್ರಾದೇಶಿಕ ಪಕ್ಷದ ಬಗ್ಗೆ ಲಘುವಾಗಿ ಮಾತನಾಡಿದರೆ ಜನರು ಪ್ರಾದೇಶಿಕ ಪಕ್ಷವನ್ನು ಬೆಂಬಲಿಸುತ್ತಾರೆ. ಜಿಲ್ಲೆಗೆ ಇನ್ನೂ ಎರಡು ಬಾರಿ ಆಗಮಿಸುತ್ತೇನೆ ಎಂದರು.

Previous articleಡಿಕೆಶಿ ಮಾತನಾಡಿದ ಆಡಿಯೋದಲ್ಲೇನಿದೆ.?
Next articleಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ದೊಡ್ಡ ಪರಿವರ್ತನೆ: ಸಿಎಂ