ಗುರುವೇ ನಿನ್ನ ಆಟ ಬಲ್ಲವರ ಯಾರ-ಯಾರೋ ಎಂದ ಸಚಿವ ಜೋಶಿ

0
41

ಸಂಗೀತದ ರಸದೌತಣ ಕಾರ್ಯಕ್ರಮದಲ್ಲಿ ಸುಪ್ರಸಿದ್ದ ಗಾಯಕ ಕೈಲಾಶ್ ಖೇರ್, ಹಾಗೂ ಕನ್ನಡದ ಕೋಗಿಲೆ- ಮಹನ್ಯ ಪಾಟೀಲ

ಹುಬ್ಬಳ್ಳಿ: ಗುರುವೇ ನಿನ್ನ ಆಟ ಬಲ್ಲವರ ಯಾರ-ಯಾರೋ…ಶಿವನೇ ನಿನ್ನ ಆಟ ಬಲ್ಲವರ ಯಾರೋ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹಾಡಿದ್ದಾರೆ.
ನಗರದ ಹೊರವಲಯದಲ್ಲಿ ನಡೆಯುತ್ತಿರುವ “ಸಂಸದ ಕ್ರೀಡಾ ಹಾಗೂ ಸಾಂಸ್ಕೃತಿಕ ಮಹೋತ್ಸವ-2025” ಹಾಗೂ “ಅಂತರಾಷ್ಟ್ರೀಯ ಗಾಳಿಪಟ ಉತ್ಸವ”ದ ಕಾರ್ಯಕ್ರಮದಲ್ಲಿ ನಿನ್ನೆ ಗಾಯಕ ಕೈಲಾಶ್ ಖೇರ್ ಅವರೊಂದಿಗೆ ಸೇರಿ ಧ್ವನಿಗೂಡಿಸಿ ಗುರುವೇ ನಿನ್ನ ಆಟ ಬಲ್ಲವರ ಯಾರ-ಯಾರೋ…ಶಿವನೇ ನಿನ್ನ ಆಟ ಬಲ್ಲವರ ಯಾರೋ…… ಎಂದು ಹಾಡಿ ರಂಜಿಸಿದ್ದಾರೆ, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ನಿನ್ನೆ ಸಂಜೆ ನಡೆದ “ಸಂಸದ ಕ್ರೀಡಾ ಹಾಗೂ ಸಾಂಸ್ಕೃತಿಕ ಮಹೋತ್ಸವ-2025” ಹಾಗೂ “ಅಂತರಾಷ್ಟ್ರೀಯ ಗಾಳಿಪಟ ಉತ್ಸವ”ದ ಅಂಗವಾಗಿ ನಡೆದ ಸಾಂಸ್ಕೃತಿಕ ಹಾಗೂ ಮನರಂಜನಾ ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಶಾಸಕ ಮಹೇಶ್ ಟೆಂಗಿನಕಾಯಿ ಹಾಗೂ ಅನೇಕ ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು, ಸಂಗೀತದ ರಸದೌತಣ ಕಾರ್ಯಕ್ರಮದಲ್ಲಿ ಸುಪ್ರಸಿದ್ದ ಗಾಯಕ ಕೈಲಾಶ್ ಖೇರ್, ಹಾಗೂ ಕನ್ನಡದ ಕೋಗಿಲೆ- ಮಹನ್ಯ ಪಾಟೀಲ ಸಂಗೀತದ ರಸದೌತಣ ಕಾರ್ಯಕ್ರಮದಲ್ಲಿ ಭಾಗಿಯಾದ ಜನರನ್ನು ರಂಜಿಸಿದರು

Previous articleತುಂಬಿದ ಮನೆ ನಿರ್ದೇಶಿಸಿದ್ದ ಎಸ್ ಉಮೇಶ್ ಇನ್ನಿಲ್ಲ
Next articleಬೋಟ್‌ನಲ್ಲಿ ಅಗ್ನಿ ಅವಘಡ: 15 ಲಕ್ಷ ನಷ್ಟ