ನ್ಯೂಯಾರ್ಕ್: ೧೪೩ನೇ ಆವೃತ್ತಿಯ ಯುಎಸ್ ಓಪನ್ ಇಲ್ಲಿ ನಡೆಯುತ್ತಿದ್ದು, ೨೩ ಗ್ರ್ಯಾಂಡ್ ಸ್ಲ್ಯಾಮ್‌ಗಳ ಒಡೆಯ ಸರ್ಬಿಯಾದ ಆಟಗಾರ ನೊವಾಕ್ ಜೋಕೊವಿಕ್ ಅವರು ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.
ಭಾನುವಾರ ತಡರಾತ್ರಿ ಆರ್ಥರ್ ಆಶ್ ಸ್ಟೇಡಿಯಂನಲ್ಲಿ ನಡೆದ ೧೬ರ ಘಟ್ಟದ ಪಂದ್ಯದಲ್ಲಿ ಜೋಕೊವಿಕ್ ಅವರು ಕ್ರೊವೇಷಿಯಾದ ಬೋರ್ನಾ ಗೊಜೊ ಅವರನ್ನು ೬-೨, ೭-೫, ೬-೪ ನೇರ ಸೆಟ್‌ಗಳ ಅಂತರದಿಂದ ಸೋಲಿಸಿ, ಕ್ವಾರ್ಟರ್ ಫೈನಲ್‌ಗೆ ಮುನ್ನಡೆದರು. ನೊವಾಕ್ ಸೆಪ್ಟೆಂಬರ್ ೫ರಂದು ನಡೆಯುವ ಕ್ವಾರ್ಟರ್ ಪೈನಲ್ ಪಂದ್ಯದಲ್ಲಿ ಅಮೆರಿಕದ ಟೈಲರ್ ಫ್ರಿಟ್ಜ್ ಅವರನ್ನು ಎದುರಿಸಲಿದ್ದಾರೆ.
