ಅಂಗನವಾಡಿ ಮೇಲ್ಛಾವಣಿ ಪ್ಲಾಸ್ಟರ್​ ಕುಸಿದು ಮಕ್ಕಳಿಗೆ ಗಾಯ

0
18

ಯಾದಗಿರಿ: ಅಂಗನವಾಡಿಯ ಮೇಲ್ಛಾವಣಿ ಪ್ಲಾಸ್ಟರ್​ ಕುಸಿದು ಮಕ್ಕಳು ಗಾಯಗೊಂಡ ಘಟನೆ ನಡೆದಿದೆ. ಮರಕಲ್ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಇಂದ್ರಧನುಷ್ ಲಸಿಕೆ ಹಾಕುತ್ತಿದ್ದ ವೇಳೆ ಈ ಅವಘಡ ಸಂಭವಿಸಿದ್ದು. ಈ ಘಟನೆಯಲ್ಲಿ 10 ತಿಂಗಳ ಮಗು ಕೀರ್ತಿ ಸೇರಿದಂತೆ ಎಂಟು ಮಕ್ಕಳಿಗೆ ಗಾಯವಾಗಿದೆ ಎಂದು ತಿಳಿದುಬಂದಿದೆ. ಗಾಯಗೊಂಡವರನ್ನು ದೇವದುರ್ಗ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಕೀರ್ತಿ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ, ಯಾವುದೇ ತೊಂದರೆ ಇಲ್ಲ ಎಂದು ಸಿಡಿಪಿಓ ಮೀನಾಕ್ಷಮ್ಮ ತಿಳಿಸಿದ್ದಾರೆ. ದೇವದುರ್ಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

Previous articleಧಾರವಾಡ ಜಿಲ್ಲೆಯ 53 ಸ್ಥಳಗಳಲ್ಲಿ ಹೊಸ ಟವರ್
Next articleಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣ: ಪತಿ ಸಾವಿಗೆ ನ್ಯಾಯ ಕೊಡಿಸುವಂತೆ ಮನವಿ