2000 ರೂ. ನೋಟು ಸ್ಥಗಿತ

0
14

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. 2,000 ರೂಪಾಯಿ ನೋಟುಗಳನ್ನು ಚಲಾವಣೆಯಿಂದ ಹಿಂಪಡೆಯಲು ನಿರ್ಧರಿಸಿದೆ.
ಸೆಪ್ಟೆಂಬರ್ 30ರೊಳಗೆ ಬ್ಯಾಂಕ್‌ಗಳಲ್ಲಿ 2000 ರೂ. ನೋಟುಗಳನ್ನು ಠೇವಣಿ ಮತ್ತು ವಿನಿಮಯ ಮಾಡಿಕೊಳ್ಳಬಹುದಾಗಿದೆ. ಅಕ್ಟೋಬರ್ 1ರಿಂದ 2,000 ರೂಪಾಯಿ ನೋಟುಗಳು ಚಲಾವಣೆ ಸ್ಥಗಿತಗೊಳ್ಳಲಿದೆ.
ಇನ್ನು 2,000 ರೂಪಾಯಿ ನೋಟು ವಿನಿಮಯ ಮಾಡಿಕೊಳ್ಳಲು ಬ್ಯಾಂಕ್ ಚಟುವಟಿಕೆಗೆ ಸಮಸ್ಯೆಯಾಗದಂತೆ ಒಂದು ದಿನಕ್ಕೆ ಒಬ್ಬ ವ್ಯಕ್ತಿಗೆ ಗರಿಷ್ಠ 20,000 ರೂ. ವಿನಿಮಯ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ.
ಸಾರ್ವಜನಿಕರು ಮಾತ್ರವಲ್ಲ ಬ್ಯಾಂಕ್ ಕೂಡ ಸೆಪ್ಟೆಂಬರ್ 30ರೊಳಗೆ 2,000 ರೂಪಾಯಿ ನೋಟಿನ ವಿನಿಮಯ, ಜಮಾವಣೆ ಮುಗಿಸಬೇಕು ಎಂದು ಆರ್‌ಬಿಐ ಹೇಳಿದೆ.

Previous articleಕೃಷ್ಣಮೃಗದ ಕೊಂಬು, ಚರ್ಮ ಮಾರಾಟ: ಓರ್ವನ ಬಂಧನ
Next articleನಾಲ್ಕು ವಾಹನಗಳಿಗೆ ಬೆಂಕಿ