ಹಾವೇರಿ ಜಿಲ್ಲೆಗೆ ಸಚಿವ ಸ್ಥಾನ ಮಿಸ್

0
26
ಕಾಂಗ್ರೆಸ್‌

ಹಾವೇರಿ: ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗೆಲ್ಲಾ ಹಾವೇರಿಗೆ ಘೋರ ಅನ್ಯಾಯ ಮಾಡುತ್ತಲ್ಲೇ ಬಂದಿದೆ ಎಂಬ ಆರೋಪಕ್ಕೆ ಪುಷ್ಟಿ ನೀಡುವಂತೆ ಈ ಸಾರಿಯೂ ಜಿಲ್ಲೆಗೆ ಸಚಿವ ಸ್ಥಾನ ಮಿಸ್ ಆಗಿದೆ.

ಜಿಲ್ಲೆಯ 6 ಕ್ಷೇತ್ರಗಳ ಪೈಕಿ 5 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿದ್ದರೂ ಸಚಿವ ಸ್ಥಾನ ಸಿಕ್ಕಿಲ್ಲ, ಅಲ್ಲದೇ ಒಳ ಮೀಸಲಾತಿಯಿಂದ ಮುನಿಸಿಕೊಂಡಿದ್ದ ಬಹುತೇಕ ಲಂಬಾಣಿ ಸಮುದಾಯ ಕಾಂಗ್ರೆಸ್ ಬೆಂಬಲಿಸಿತ್ತು. ಹೀಗಿದ್ದರೆ ಲಂಬಾಣಿ ಸಮುದಾಯದಿಂದ ಗೆದ್ದಿರುವ ಏಕೈಕ ಶಾಸಕ ರುದ್ರಪ್ಪ ಲಮಾಣಿಗೆ ಸಚಿವ ಸ್ಥಾನ ಕೊಟ್ಟಿಲ್ಲ, ಪರಿಣಾಮ ಲಂಬಾಣಿ ಸಮುದಾಯ ಮುನಿಸಿಕೊಳ್ಳುವಂತಾಗಿದೆ.

ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್, ಹಿರಿಯ ಶಾಸಕ, ಮಾಜಿ ಸಚಿವ ಬಸವರಾಜ ಶಿವಣ್ಣನವರಿಗೂ ಸಚಿವ ಸ್ಥಾನ ಸಿಗದಿರುವುದು ಬೆಂಬಲಿಗರಿಗೆ ಬೇಸರ ಮೂಡಿಸಿದೆ.

ಅಲ್ಲದೇ ಬಿಜೆಪಿ ಸರ್ಕಾರದಲ್ಲಿದ್ದಾಗ ಶಕ್ತಿ ಕೇಂದ್ರವಾದರೆ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗೆಲ್ಲಾ ಅಧಿಕಾರದಿಂದ ವಂಚಿತವಾಗುವುದು ವಿಪರ್ಯಾಸವಾಗಿದೆ.

Previous articleಲಕ್ಷ್ಮಣ ಸವದಿಗೆ ಬಿಗ್ ಶಾಕ್ !
Next articleಗುಜರಾತ್ ಟೈಟನ್ಸ್‌ಗೆ ಅಮೋಘ ಗೆಲುವು