ಊಟ ಸೇವಿಸಿದ ಬಳಿಕ 35 ಮಂದಿ ಸೈನಿಕರು ಅಸ್ವಸ್ಥ

0
19

ಹಾಸನ: ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ, ಕುಡುಗರಹಳ್ಳಿಯಲ್ಲಿ ಮಧ್ಯಾಹ್ನದ ಊಟ ಸೇವಿಸಿದ ನಂತರ 35 ಸೈನಿಕರು ಅಸ್ವಸ್ಥರಾಗಿರುವಂತಹ ಘಟನೆ ನಡೆದಿದೆ.
ವಾಹನ ಚಾಲನಾ ತರಬೇತಿಗೆ ಸೈನಿಕರು ಬಂದು ಇಲ್ಲೇ ತಂಗಿದ್ದರು. ಮಧ್ಯಾಹ್ನ ಕ್ಯಾಂಪ್‌ನಲ್ಲೇ ತಯಾರಾದ ಆಹಾರ ಸೇವಿಸಿದ ಬಳಿಕ ಸೈನಿಕರು ಅಸ್ವಸ್ಥತೆಗೆ ಒಳಗಾಗಿದ್ದಾರೆ ಎನ್ನಲಾಗುತ್ತಿದೆ. ಸದ್ಯ ಅಸ್ವಸ್ಥ ಸೈನಿಕರಿಗೆ ಸಕಲೇಶಪುರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ಆಸ್ಪತ್ರೆಗೆ ಶಾಸಕ ಸಿಮೆಂಟ್ ಮಂಜು ಭೇಟಿ ನೀಡಿದ್ದು, ಅಸ್ವಸ್ಥಗೊಂಡಿರುವ ಸೈನಿಕರ ಆರೋಗ್ಯ ವಿಚಾರಿಸಿದ್ದಾರೆ.

Previous articleಟ್ರ್ಯಾಕ್ಟರ್ ಪಲ್ಟಿ ಚಾಲಕ ಸ್ಥಳದಲ್ಲೆ ಸಾವು
Next articleಅಕ್ರಮ ಮರಳು ಸಾಗಣೆ ಜೋರು: ಹಗಲು ಬೈಕ್ ರಾತ್ರಿ ಕತ್ತೆಗಳ ಬಳಕೆ