ದರ್ಶನ್ ಗ್ಯಾಂಗ್‌ಗೆ ನಿಜವಾದ ಸಂಕಷ್ಟ ಈಗ ಶುರು

0
16

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದೋಷಾರೋಪ ಎದುರಿಸಿದ ದರ್ಶನ್ ಗ್ಯಾಂಗ್ ತೀವ್ರ ತೊಳಲಾಟದಲ್ಲಿದೆ. ನವೆಂಬರ್ 10 ರಂದು ಟ್ರಯಲ್ ದಿನಾಂಕ ನಿಗದಿಯಾಗುತ್ತದೆ. ಸಾಕ್ಷಿಗಳ ವಿಚಾರಣೆ ಆರಂಭವಾಗುತ್ತದೆ. ಮುಂದೇನು ಎಂಬ ಪ್ರಶ್ನೆ ದರ್ಶನ್, ಪವಿತ್ರ ಮತ್ತು ಗ್ಯಾಂಗ್‌ನವರನ್ನು ಕಾಡುತ್ತಿದೆ. ನ10.ರಿಂದ ಕೋರ್ಟ್‌ಲ್ಲಿ ಕೊಲೆ ಕೇಸ್ ವಿಚಾರಣೆ ಆರೋಪ ಸಾಬೀತಾದರೆ ಗಲ್ಲು / ಜೀವಾವಧಿ.

ಈ ಮಧ್ಯೆ ದರ್ಶನ್ ತನ್ನ ಗ್ಯಾಂಗ್‌ನವರಿಗೆ ಜಾಮೀನು ಸಿಗುತ್ತದೆ ನೀವು ಚಿಂತೆ ಮಾಡಬೇಡಿ ಎಂದು ಹೇಳಿದ್ದಾರೆಂದೂ ಗೊತ್ತಾಗಿದೆ. ಒಂದೆಡೆ ಡಿ-ಗ್ಯಾಂಗ್‌ ಜಾಮೀನು ನಿರೀಕ್ಷೆಯಲ್ಲಿದ್ದರೆ, ಇನ್ನೊಂದೆಡೆ ನಟ ದರ್ಶನ್ ವಿರುದ್ಧ ಪೊಲೀಸರು ಸಮರ ಸಾರಿದ್ದಾರೆ. ಆರೋಪ ಸಾಬೀತು ಮಾಡಲು ಪ್ರಬಲ ಸಾಕ್ಷ್ಯಗಳನ್ನು ಕೋರ್ಟ್‌ಗೆ ಸಲ್ಲಿಸಲಾಗಿದ್ದು, ದರ್ಶನ್ ವಿರುದ್ಧ ಐಪಿಸಿ ಸೆಕ್ಷನ್ 302 (ಕೊಲೆ) ದಾಖಲಾಗಿದೆ.
ಐಪಿಸಿ ಸೆಕ್ಷನ್ 302 ಸಾಬೀತಾದಲ್ಲಿ ದರ್ಶನ್‌ಗೆ

ಅರ್ಜಿಯನ್ನು ಪುನರ್‌ಪರಿಶೀಲಿಸುವಂತೆ ಸುಪ್ರೀಂಕೋರ್ಟಿಗೆ ಮೊರೆ ಹೋಗಿದ್ದಾರೆ. ಗುರುವಾರ ಇದರ ವಿಚಾರಣೆಯೂ ನಡೆಯಲಿದೆ. ಸೋಮವಾರ ನ್ಯಾಯಾಲಯಕ್ಕೆ ಹಾಜರಾಗುವ ಮುನ್ನ ದರ್ಶನ್, ಪವಿತ್ರ ಸೇರಿ ಎಲ್ಲ ಆರೋಪಿಗಳಿಗೆ ಇದ್ದ ಆತಂಕ, ದುಗುಡ ಕೊಂಚ ಮಟ್ಟಿಗೆ ದೂರವಾಗಿದೆ ಎಂದು ಹೇಳಲಾಗುತ್ತಿದೆ. ಆದರೆ ಪೊಲೀಸರು ಮಾತ್ರ ಈ ಮುಂಚೆ ಒದಗಿಸಿದ ಎಲ್ಲ ಸಾಕ್ಷ್ಯಗಳನ್ನು ಹೇಗೆ ಪ್ರಸ್ತುತ ಪಡಿಸಬೇಕು ಎಂಬ ತಯಾರಿ ಮಾಡಿಕೊಳ್ಳುತ್ತಿದ್ದಾರೆ

ಸುಪ್ರೀಂ ಮೆಟ್ಟಿಲೇರಿದ ಪವಿತ್ರಾಗೌಡ

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ಮಹತ್ವದ ಬೆಳವಣಿಗೆಯೊಂದು ನಡೆದಿದ್ದು, ಪ್ರಕರಣದ ಎl ಆರೋಪಿ ಪವಿತ್ರಾ ಗೌಡ ಅವರು ಸುಪ್ರೀಂ ಕೋರ್ಟ್ನಲ್ಲಿ ಪುನ‌ರ್ ಪರಿಶೀಲನಾ ಅರ್ಜಿ ಸಲ್ಲಿಸಿದ್ದಾರೆ.ಸೋಮವಾರ ಬೆಂಗಳೂರಿನ 64ನೇ ಸೆಷನ್ಸ್ ಕೋರ್ಟ್‌ನಲ್ಲಿ ನಟ ದರ್ಶನ್ ಸೇರಿ ಪ್ರಕರಣದ ಎಲ್ಲ 17 ಆರೋಪಿಗಳ ವಿರುದ್ಧ ಕೊಲೆ, ಅಪಹರಣ, ಮತ್ತು ಕಾನೂನುಬಾಹಿರ ಸಭೆಯಂತಹ ಗಂಭೀರ ಆರೋಪಗಳೊಂದಿಗೆ ದೋಷಾರೋಪ ನಿಗದಿಯಾಗಿತ್ತು.

ಇದರ ಬೆನ್ನಲ್ಲೇ ಪವಿತ್ರಾ ಗೌಡ ಅವರು ಈ ಕಾನೂನಾತ್ಮಕ ನಡೆ ತೆಗೆದುಕೊಂಡಿದ್ದಾರೆ. ಹೈಕೋರ್ಟ್ ನೀಡಿದ್ದ ಜಾಮೀನನ್ನು ರದ್ದುಗೊಳಿಸಿ, ಎಲ್ಲ ಆರೋಪಿಗಳನ್ನು ಮತ್ತೆ ಜೈಲಿಗೆ ಕಳುಹಿಸಿದ್ದ ಸುಪ್ರೀಂ ಕೋರ್ಟ್ನ ಆದೇಶವನ್ನು ಮತ್ತೊಮ್ಮೆ ಪರಿಶೀಲಿಸುವಂತೆ ಕೋರಿ ಈ ಅರ್ಜಿ ಸಲ್ಲಿಸಲಾಗಿದೆ. ಈ ಹಿಂದೆ ಹೈಕೋರ್ಟ್ ಅಕ್ಟೋಬರ್ ಮತ್ತು ಡಿಸೆಂಬರ್ 2024ರಲ್ಲಿ ದರ್ಶನ್ ಮತ್ತು ಪವಿತ್ರಾ ಗೌಡ ಸೇರಿದಂತೆ ಆರೋಪಿಗಳಿಗೆ ಜಾಮೀನು ನೀಡಿತ್ತು.

ಆದರೆ, ಕರ್ನಾಟಕ ಸರ್ಕಾರವು ಇದನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿತ್ತು ಮತ್ತು ಆಗಸ್ಟ್ 14 ರಂದು ಸುಪ್ರೀಂ ಕೋರ್ಟ್ ಹೈಕೋರ್ಟ್‌ನ ಜಾಮೀನು ಆದೇಶವನ್ನು ರದ್ದುಗೊಳಿಸಿತ್ತು. ಇದೀಗ, ಪವಿತ್ರಾ ಗೌಡ ಪರ ವಕೀಲರು, ಸುಪ್ರೀಂ ಕೋರ್ಟ್‌ ಹಿಂದಿನ ಆದೇಶದಲ್ಲಿ ಕೆಲವು ತಪ್ಪುಗಳಿವೆ. ಹೈಕೋರ್ಟ್ ನಿರ್ಧಾರ ಸರಿಯಾಗಿತ್ತು ಮತ್ತು ಸುಪ್ರೀಂ ಕೋರ್ಟ್ ಸಾಕ್ಷ್ಯಗಳನ್ನು ಸರಿಯಾಗಿ ಪರಿಗಣಿಸಿಲ್ಲ ಎಂದು ವಾದಿಸಿದ್ದಾರೆ.

ಆದೇಶವನ್ನು ಪುನರ್ ಪರಿಶೀಲಿಸಿ, ಜಾಮೀನು ನೀಡಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ. ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನವೆಂಬರ್ 6ರಂದು ಕೈಗೆತ್ತಿಕೊಳ್ಳಲಿದ್ದು, ಈ ಸಂಬಂಧರಾಜ್ಯ ಸರ್ಕಾರಕ್ಕೆ ನೋಟಿಸ್‌ ಜಾರಿ ಮಾಡಿದೆ. ಪರಿಶೀಲನಾ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ ನವೆಂಬರ್‌ 6ರಂದು ಕೈಗೆತ್ತಿಕೊಳ್ಳಲಿದ್ದು, ಈ ಸಂಬಂಧ ರಾಜ್ಯ ಸರ್ಕಾರಕ್ಕೆ ನೋಟಿಸ್‌ ಜಾರಿ ಮಾಡಿದೆ.

ಸೋಮವಾರ ನಿದ್ರೆ ಮಾಡಿದ ದರ್ಶನ್
ಕೋರ್ಟ್‌ಗೆ ಹೋಗಿ ಬಂದ ಆಯಾಸದಿಂದ, ನಟ ದರ್ಶನ್ ಸೋಮವಾರ ರಾತ್ರಿ ಬೇಗನೆ ನಿದ್ರೆಗೆ ಜಾರಿದ್ದಾರೆ. ರಾತ್ರಿ 9.30ರ ಸುಮಾರಿಗೆ ಊಟ ಮುಗಿಸಿ ಮಲಗಿದ್ದ ದಾಸ, ಬೆಳಗ್ಗೆ 6 ಗಂಟೆಗೆ ನಿದ್ರೆಯಿಂದ ಎದ್ದಿದ್ದಾರೆ. ಕೆಲ ಹೊತ್ತು ಬ್ಯಾರಕ್‌ನಲ್ಲಿಯೇ ವಾಕಿಂಗ್‌ ಮಾಡಿ, ಬಿಸಿ ನೀರು ಕುಡಿದು ಸೆಲ್‌ನಲ್ಲಿ ವಿಶ್ರಾಂತಿ ತೆಗೆದುಕೊಂಡಿದ್ದಾರೆ.
ಆರಂಭದಲ್ಲಿ ಜೈಲಿನ ಊಟ ಸೇರದೆ, ನಿದ್ರೆ ಇಲ್ಲದೆ ಸೊರಗಿ ಹೋಗಿದ್ದ ದರ್ಶನ್, ಈಗ ಕೊಂಚಮಟ್ಟಿಗೆ ರಿಲ್ಯಾಕ್ಸ್‌ ಆಗಿದ್ದಾರೆ ಎಂದು ತಿಳಿದುಬಂದಿದೆ.

ದರ್ಶನ್ ವಿರುದ್ಧದ ವಿವಿಧ ಸೆಕ್ಷನ್‌ಗಳು

  • ಸೆಕ್ಷನ್ 302: ಕೊಲೆ ಆರೋಪ
  • ಸೆಕ್ಷನ್ 120-ಬಿ: ಕೊಲೆ ಸಂಚು
  • ಸೆಕ್ಷನ್ 364: ಅಪಹರಿಸಿರುವ ಆರೋಪ
  • ಸೆಕ್ಷನ್ 201: ಶವ ಬಿಸಾಡಿ, ಸಾಕ್ಷ್ಯ ನಾಶ
  • ಸೆಕ್ಷನ್ 504: ಅವಾಚ್ಯ ಶಬ್ದದ ನಿಂದನೆ
  • ಸೆಕ್ಷನ್ 149: ಗುಂಪು ಸೇರಿ ಕೃತ್ಯ
  • ಸೆಕ್ಷನ್ 143: ಅಕ್ರಮ ಕೂಟ ರಚನೆ
  • ಸೆಕ್ಷನ್ 147, 148: ಮಾರಣಾಂತಿಕ ಅಸ್ತ್ರಗಳೊಂದಿಗೆ ಗಲಭೆ ಮಾಡಿದ್ದು
  • ಸೆಕ್ಷನ್ 342: ಅಕ್ರಮ ಬಂಧನ ಆರೋಪ
Previous articleನೋಂದಣಾಧಿಕಾರಿ ಕಚೇರಿಗಳ ಮೇಲೆ ಲೋಕಾಯುಕ್ತ ದಾಳಿ
Next articleದಾಂಡೇಲಿಯ ಕಾಡಿನಲ್ಲಿ ಅಪರೂಪಕ್ಕೆ ಕತ್ತೆಕಿರುಬದ ದಶ೯ನ

LEAVE A REPLY

Please enter your comment!
Please enter your name here