ಪಥ ಸಂಚಲನಕ್ಕೆ ತಾಲೂಕು ಆಡಳಿತ ನಿರ್ಬಂಧ : ಕೋರ್ಟ್ ಮೆಟ್ಟಿಲೇರಿದ RSS ಮುಖಂಡರು

0
65
ಸಾಂದರ್ಭಿಕ ಚಿತ್ರ

ಸಂ.ಕ.ಸಮಾಚಾರ ಚಿತ್ತಾಪುರ/ ಕಲಬುರಗಿ: ಚಿತ್ತಾಪುರ ಪಟ್ಟಣದಲ್ಲಿ ಪಥ ಸಂಚಲನ ನಡೆಸಲು ಅನುಮತಿ ನೀಡದ ತಾಲೂಕು ಆಡಳಿತ ವಿರುದ್ಧ ಆರ್‌ಎಸ್‌ಎಸ್ ಮುಖಂಡರು ನ್ಯಾಯಾಲಯ ಮೊರೆ ಹೋಗಿದ್ದಾರೆ. ಇಂದು ಬೆಳಿಗ್ಗೆ 12 ಗಂಟೆಗೆ ತೀರ್ಪು ಪ್ರಕಟವಾಗಲಿದ್ದು, ಇದೀಗ ರಾಜ್ಯದ ಚಿತ್ತ ಚಿತ್ತಾಪುರದತ್ತ ನೆಟ್ಟಿದೆ.

ಪಥ ಸಂಚಲನ ನಡೆಸಲು ಅನುಮತಿ ಕೋರಿ ತಹಶಿಲ್ದಾರ ನಾಗಯ್ಯ ಹಿರೇಮಠ ಅವರಿಗೆ ಆರ್ ಎಸ್ ಎಸ್ ಮುಖಂಡರು ಮನವಿ ಸಲ್ಲಿಸಿದ್ದರು. ಅಗತ್ಯ ದಾಖಲೆಗಳನ್ನು ಸಲ್ಲಿಸುವಂತೆ ಮನವಿ ತಿರಸ್ಕರಿಸಿರುವ ತಹಸೀಲ್ದಾರ್ ಅವರು ಪಥ ಸಂಚಲನ ನಡೆಸಲು ನಿರ್ಬಂಧ ಹೇರಿ ಆದೇಶ ಹೊರಡಿಸಿದ್ದಾರೆ.

ಚಿತ್ತಾಪೂರ ಪಟ್ಟಣದಲ್ಲಿ ಆರ್.ಎಸ್.ಎಸ್ ನವರು ಹಾಗೂ ಭೀಮ್ ಅರ್ಮಿ ಸಂಘಟನೆ, ಭಾರತೀಯ ದಲಿತ ಪ್ಯಾಂಥರ (ರಿ) ಸಂಘದ ಕಾರ್ಯಕರ್ತರು ಪಥ ಸಂಚಲನ ಕೈಕೊಂಡರೇ ಎಲ್ಲಾ ಸಂಘಟನೆಗಳು ಒಟ್ಟಿಗೆಯಾಗಿ ಪಥ ಸಂಚಲನ ಮಾಡಿದ್ದಲ್ಲಿ ಸಂಘನೆಗಳ ಮಧ್ಯೆ ಯಾವುದಾರೂ ಗೊಂದಲ, ಕಾನೂನು ಸುವ್ಯವಸ್ಥೆ ಹಾಳಾಗುವ ಸಾಧ್ಯತೆ ಕಂಡು ಬಂದಿರುವುದರಿಂದ. ಆರ್.ಎಸ್.ಎಸ್ ಪಥ ಸಂಚಲನ ನಡೆಸಲು ನಿರ್ಬಂಧ ಆದೇಶ ಹೊರಡಿಸಲಾಗಿದೆ ಎಂದು ತಹಶೀಲ್ದಾರ್ ನಾಗಯ್ಯ ಹಿರೇಮಠ ತಿಳಿಸಿದರು.

ಒಟ್ಟಾರೆ ಚಿತ್ತಾಪುರ ಪಟ್ಟಣ ಬೂದಿ ಮುಚ್ಚಿದ ಕೆಂಡದಂತಾಗಿದೆ.

Previous articleಬಾಗಲಕೋಟೆ: ಬೆಂಕಿ ಅವಘಡ – 7 ಜನರಿಗೆ ಗಾಯ
Next articleಚಿತ್ತಾಪುರದಲ್ಲಿ ಪಥಸಂಚಲನಕ್ಕೆ ಹೈಕೋರ್ಟ್ ತಡೆ – ಪ್ರತ್ಯೇಕ ದಿನಾಂಕ ನಿಗದಿ ಸೂಚನೆ

LEAVE A REPLY

Please enter your comment!
Please enter your name here