ಕಲಬುರಗಿ: ದುಷ್ಕರ್ಮಿಯೊಬ್ಬ ಲಾರಿ ಚಾಲಕನೊಬ್ಬನಿಗೆ ಕಲ್ಲಿನಿಂದ ಜಜ್ಜಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಸೇಡಂ ಪಟ್ಟಣದ ಉಡಗಿ ಕಮಾನ್ ಬಳಿ ಮಂಗಳವಾರ ಬೆಳಗಿನ ಜಾವ ನಡೆದಿದೆ. ಲಾರಿ ಚಾಲಕನಾಗಿ ಕೆಲಸ ಮಾಡುತ್ತಿದ್ದ ಸೇಡಂ ಪಟ್ಟಣದ ನಿವಾಸಿ ಶೇಖ್ ರಿಯಾಝ್ (45) ಕೊಲೆಯಾಗಿದೆ.
ಸೇಡಂ ಸಮೀಪದ ಹಯ್ಯಾಳ ಗ್ರಾಮದ ನಿವಾಸಿ ಝಹೀರ್ ಶಾಬುದ್ದೀನ್ (26) ಕೊಲೆ ಆರೋಪಿ ಎಂದು ತಿಳಿದು ಬಂದಿದ್ದು, ಆತನನ್ನು ಪೊಲೀಸರು ಬಂಧಿಸಿದ್ದಾರೆ. ರಿಯಾಝ್ ಮಂಗಳವಾರ ಬೆಳಗ್ಗೆ ವಾಸವಧತ್ತಾ ಸಿಮೆಂಟ್ ಕಾರ್ಖಾನೆಯಿಂದ ಮನೆಗೆ ತೆರಳುತ್ತಿದ್ದ ವೇಳೆ ಏಕಾಏಕಿ ಅಡ್ಡಗಟ್ಟಿದ ದುಷ್ಕರ್ಮಿ ಕಲ್ಲಿನಿಂದ ಹೊಡೆದು ಪರಾರಿಯಾಗಿದ್ದ ಎನ್ನಲಾಗಿದೆ.
ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಬಂಧಿಸಿದ ಆರೋಪಿಯನ್ನು ತೀವ್ರ ವಿಚಾರಣೆ ನಡೆಸಲಾಗುತ್ತಿದೆ ಎಂದು ಸೇಡಂ ಪೊಲೀಸರು ತಿಳಿಸಿದ್ದಾರೆ.