ಧಾರವಾಡ: ಸೆ. 13ರಂದು ರಾಷ್ಟ್ರೀಯ ಲೋಕ ಅದಾಲತ್

0
68

ಧಾರವಾಡ: ಧಾರವಾಡ ಜಿಲ್ಲೆಯಲ್ಲಿ ಸೆಪ್ಟೆಂಬರ್ 13ರಂದು ರಾಷ್ಟ್ರೀಯ ಲೋಕ ಅದಾಲತ್ ನಡೆಯಲಿದೆ ಎಂದು ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶೆ ಬಿ.ಎಸ್. ಭಾರತಿ ಮಾಹಿತಿ ನೀಡಿದರು. ನಗರದಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಷ್ಟ್ರದಾದ್ಯಂತ ಜುಲೈ 1ರಿಂದ ಅಕ್ಟೋಬರ್ 7ರವರೆಗೆ ರಾಜ್ಯ ಪೊಲೀಸ್ ಇಲಾಖೆಯ ಸಂಚಾರಿ ಇ-ಚಲನ್ ಮೂಲಕ ವಿಧಿಸಲಾದ ದಂಡ ಮೊತ್ತದಲ್ಲಿ ರಿಯಾಯಿತಿಯನ್ನು ಪಡೆಯುವ ಅವಕಾಶ ಸಿಗಲಿದೆ ಎಂದು ಹೇಳಿದರು. ಜನರು ಈ ಸದುಪಯೋಗ ಪಡೆದುಕೊಂಡು ತಮ್ಮ ಪ್ರಕರಣಗಳನ್ನು ಮುಕ್ತಾಯಗೊಳಿಸಿಕೊಳ್ಳಬೇಕೆಂದು ಕರೆ ನೀಡಿದರು.

ಬಾಕಿ ಪ್ರಕರಣಗಳ ಸ್ಥಿತಿ: ಧಾರವಾಡ ಜಿಲ್ಲಾ ನ್ಯಾಯಾಲಯದಲ್ಲಿ ಒಟ್ಟು ಬಾಕಿ ಪ್ರಕರಣಗಳು (ಜು. 1ರವರೆಗೆ): 28,358. ಮಧ್ಯಸ್ಥಿಕೆಗೆ ಗುರುತಿಸಲಾದ ಪ್ರಕರಣಗಳು: 725. ಮಧ್ಯಸ್ಥಿಕೆಗೆ ತೆಗೆದುಕೊಳ್ಳಲಾದವು: 328. ಇತ್ಯರ್ಥಗೊಂಡವು: 66 ಮಧ್ಯಸ್ಥಿಕೆ ಆಗದೇ ಉಳಿದವು: 127

ನ್ಯಾಯಾಧೀಶೆಯವರ ಪ್ರಕಾರ, ದೇಶದ ಎಲ್ಲಾ ನ್ಯಾಯಾಲಯಗಳಲ್ಲಿ ಜುಲೈ 1ರಿಂದ ಅಕ್ಟೋಬರ್ 7ರವರೆಗೆ ವಿಶೇಷ ಅಭಿಯಾನ ಕೈಗೊಳ್ಳಲಾಗಿದ್ದು, ಈ ಅವಧಿಯಲ್ಲಿ ವಿವಿಧ ಪ್ರಕರಣಗಳನ್ನು ಮಧ್ಯಸ್ಥಿಕೆ ಹಾಗೂ ಸಂಧಾನದ ಮೂಲಕ ಬಗೆಹರಿಸಲಾಗುತ್ತದೆ.

ಈ ಪತ್ರಿಕಾಗೋಷ್ಠಿಯಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶ ಪರಶುರಾಮ ದೊಡ್ಡಮನಿ ಹಾಗೂ ವಕೀಲರ ಸಂಘದ ಅಧ್ಯಕ್ಷ ಅಶೋಕ ಏಣಿಗಿ ಉಪಸ್ಥಿತರಿದ್ದರು.

Previous articleಹುಬ್ಬಳ್ಳಿ: ರೈಲ್ವೆ ಪ್ಲಾಟ್‌ಫಾರ್ಮ್ ನಲ್ಲಿ 11 ಕೆ.ಜಿ ಗಾಂಜಾ ಪತ್ತೆ
Next articleಹುಬ್ಬಳ್ಳಿ: ವೀರಶೈವ-ಲಿಂಗಾಯತ ಏಕತಾ ಸಮಾವೇಶ ಸೆ.19ಕ್ಕೆ

LEAVE A REPLY

Please enter your comment!
Please enter your name here