20 ಲಕ್ಷ ಮೌಲ್ಯದ ಚಿನ್ನಾಭರಣ ಕಳವು 20 ಗಂಟೆಯೊಳಗೆ ಪತ್ತೆಹಚ್ಚಿದ ಪೊಲೀಸರು

0
21

ಮಂಗಳೂರು: ಮಂಗಳೂರು ನಗರದ ಲಾಲ್ ಬಾಗ್ ಹ್ಯಾಟ್ ಹಿಲ್ ಪ್ರದೇಶದಲ್ಲಿನ ಅಪಾರ್ಟ್‌ಮೆಂಟ್‌ನಲ್ಲಿ ನಡೆದ ಸುಮಾರು ₹20 ಲಕ್ಷ ಮೌಲ್ಯದ ಚಿನ್ನಾಭರಣ, ನಗದು, ವಿದೇಶಿ ಕರೆನ್ಸಿ ಮತ್ತು ಮೊಬೈಲ್ ಫೋನ್ ಕಳವು ಪ್ರಕರಣವನ್ನು ಉರ್ವಾ ಪೊಲೀಸ್ ಠಾಣೆಯವರು ಕೇವಲ 20 ಗಂಟೆಗಳೊಳಗೆ ಪತ್ತೆಹಚ್ಚಿ, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಕಳವು ವಿವರ: ದಿನಾಂಕ 19/20 ಅಕ್ಟೋಬರ್ 2025ರ ರಾತ್ರಿ ಉರ್ವಾ ಠಾಣಾ ವ್ಯಾಪ್ತಿಯ ದೇರೆಬೈಲ್ ಗ್ರಾಮದಲ್ಲಿನ ಲಾಲ್ ಬಾಗ್ ಹ್ಯಾಟ್ ಹಿಲ್ ಪ್ರದೇಶದ ಅಪಾರ್ಟ್‌ಮೆಂಟ್‌ನ ಮೂರು ಫ್ಲಾಟ್‌ಗಳಿಗೆ ಕಳ್ಳರು ನುಗ್ಗಿ ಸುಮಾರು ₹20 ಲಕ್ಷ ಮೌಲ್ಯದ ಚಿನ್ನಾಭರಣ, ₹5,000 ನಗದು, 3,000 ದಿರ್ಹಮ್ ಮತ್ತು ಮೊಬೈಲ್ ಫೋನ್‌ಗಳನ್ನು ಕದ್ದಿದ್ದಾರೆ. ಈ ಬಗ್ಗೆ ರಿಯಾಜ್ ರಶೀದ್ ಅವರು ಉರ್ವಾ ಠಾಣೆಗೆ ದೂರು ನೀಡಿದ್ದರು.

ಪೊಲೀಸ್ ತನಿಖೆ ಮತ್ತು ಬಂಧನ: ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಉರ್ವಾ ಠಾಣೆಯ ಠಾಣಾಧಿಕಾರಿ, ಸಿಬ್ಬಂದಿ, ಶ್ವಾನ ದಳ ಮತ್ತು ಫಿಂಗರ್‌ಪ್ರಿಂಟ್ ತಜ್ಞರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸಿದರು. ಕೇವಲ 20 ಗಂಟೆಗಳ ಒಳಗೆ ಶೀಘ್ರ ಕಾರ್ಯಾಚರಣೆ ನಡೆಸಿ, ಆರೋಪಿಗಳನ್ನು ಬೆಂಗಳೂರು ನಗರದಲ್ಲಿ ಬಂಧಿಸಲಾಯಿತು. ಬಂಧಿತರಾದ ಇಬ್ಬರು ಅಸ್ಸಾಂ ಮೂಲದ ಅಂತರರಾಜ್ಯ ಮನೆಕಳ್ಳರಾಗಿದ್ದಾರೆ. ಅಭಿಜಿತ್ ದಾಸ್ (24). ದೇಬಾ ದಾಸ್ (21) ಆರೋಪಿ ಅಭಿಜಿತ್ ದಾಸ್ ವಿರುದ್ಧ ಈಗಾಗಲೇ ಬೆಂಗಳೂರು ನಗರ ಮತ್ತು ಅಸ್ಸಾಂ ರಾಜ್ಯಗಳಲ್ಲಿ ಅನೇಕ ಕಳ್ಳತನ ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಮುಂದಿನ ತನಿಖೆಗಾಗಿ ಪೊಲೀಸ್ ವಶಕ್ಕೆ ತೆಗೆದುಕೊಳ್ಳಲಾಗಿದೆ. ಇತರ ಪ್ರಕರಣಗಳಿಗೂ ಇವರ ಸಂಬಂಧವಿದ್ದೆಯೇ ಎಂಬುದನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.

Previous articlerain alert: ದೀಪಾವಳಿ ಸಂಭ್ರಮಕ್ಕೆ ವರುಣನ ಅಡ್ಡಿ? ಕರ್ನಾಟಕದಲ್ಲಿ 7 ದಿನ ಧಾರಾಕಾರ ಮಳೆ!
Next articleಹಬ್ಬದ ಸಂಭ್ರಮದಲ್ಲೇ ರಸ್ತೆ ಅಪಘಾತಗಳು : 3 ದುರಂತ 8 ಸಾವು; ಎಲ್ಲರು ಯುವಕರು

LEAVE A REPLY

Please enter your comment!
Please enter your name here