ಬೀರದೇವರ ಜಾತ್ರೆ: ಭಕ್ತರಿಂದ ಭಂಡಾರ ಸಮರ್ಪನೆ

0
52

ಕುಳಗೇರಿ ಕ್ರಾಸ್: ಕುಳಗೇರಿ ಗ್ರಾಮದ ಬೀರಲಿಂಗೇಶ್ವರನ 67ನೇ ಜಾತ್ರಾ ಮಹೋತ್ಸವ ಅ.20 ರಿಂದ 25ರ ವರೆಗೆ ನಡೆಯಲಿದೆ. ಅ.23 ಸಾಯಂಕಾಲ 5:00 ಗಂಟೆಗೆ ಬೀರೆಶ್ವರ ಮಾಹಾ ರಥೋತ್ಸವ ಜರುಗಲಿದೆ.

ಅ.20 ರಂದು ಬರಮದೇವರ ಹಬ್ಬ. ಅ.21ರಂದು ಪಲ್ಲಕ್ಕಿ ಉತ್ಸವ, ಅ.22 ರಂದು ವಾಹನೋತ್ಸವ ಹಾಗೂ ದೀಪೋತ್ಸವ, ಅದೆದಿನ ರಾತ್ರಿ ಡೊಳ್ಳಿನ ಪದಗಳು ಜರುಗಲಿವೆ. ಅ.23ರಂದು ಬೆಳಿಗ್ಗೆ ಪುಷ್ಪಪೂಜಾ ಕಾರ್ಯಕ್ರಮ ನಡೆಯಲಿದ್ದು ಸಾಯಂಕಾಲ 5 ಗಂಟೆಗೆ ರಥೋತ್ಸವ ನಡೆಯಲಿದೆ. ಜಾತ್ರೆಗೆ ಆಗಮಿಸಿದ ಭಕ್ತರಿಗೆ ಅನ್ನ ಸಂತರ್ಪಣೆ ನಡೆಯಲಿದೆ.

ಅ 24ರಂದು ಬೆಳಿಗ್ಗೆ 11ಗಂಟೆಗೆ ಭಂಡಾರ ಒಡೆಯುವ ಕಾರ್ಯಕ್ರಮ ನಡೆಯಲಿದೆ. ಅ.25 ರಂದು ಸೋಲಾಪೂರದ ಕುರಘೋಟ ಅಮೋಘಸಿದ್ಧೇಶ್ವರ ಹಾಗೂ ವಿಜಯಪೂರ ಹಲಸಂಗಿ ಬೀರಲಿಂಗೇಶ್ವರ ಡೊಳ್ಳಿನ ಗಾಯನ ಸಂಘದವರಿಂದ ಜಿದ್ದಾ ಜಿದ್ದಿನ ಡೊಳ್ಳಿನ ಪದಗಳು ಜರುಗಲಿವೆ.

ಅ.26 ರಂದು ಕಬಡ್ಡಿ ಪಂದ್ಯಾವಳಿ ನಡೆಯಲಿದ್ದು ಜಾತ್ರೆಯ ನಿಮಿತ್ಯ ಹತ್ತು ಹಲವು ಮನೋರಂಜನೆ ಕಾರ್ಯಕ್ರಮಗಳು ನಡೆಯಲಿವೆ ಎಂದು ಸಣ್ಣಬೀರಪ್ಪ ಪೂಜಾರ ಅಜ್ಜನವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈ ಜಾತ್ರೆಗೆ ನೆರೆಯ ಜಿಲ್ಲೆಗಳಿಂದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವರು, ಕಾರಣ ಗ್ರಾಮದಲ್ಲಿ ಸ್ವಚ್ಛತೆ ಕಾಪಾಡುವುದರ ಜೊತೆಗೆ ಗ್ರಾಮಸ್ಥರು ಬಂದ ಭಕ್ತರಿಗೆ ಗೌರವಿಸಬೇಕು.

ಜಾತ್ರೆಯ ದಿನ ಮಹಿಳೆಯರು ತಮ್ಮ ಮನೆಯ ಅಂಗಳ ಸ್ವಚ್ಛಗೊಳಿಸಿ ರಂಗೋಲಿ ಹಾಕಿ ಅಂದಗೊಳಿಸಬೇಕು ಎಂದು ಗ್ರಾಮದ ಮಹಿಳೆಯರಿಗೆ ಕಮಿಟಿಯವರು ಮನವಿ ಮಾಡಿದರು.

Previous articleಭಾರತ-ದಕ್ಷಿಣ ಆಫ್ರಿಕಾ ಟೆಸ್ಟ್‌ ಸರಣಿ: 60 ರೂಪಾಯಿಗಳಲ್ಲಿ ಅಂತರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ ನೋಡಿ
Next articleಕರ್ನಾಟಕದ ಮುಂದಿನ ಸಿಎಂ ಕುರಿತು ಕೋಡಿಮಠದ ಶ್ರೀಗಳ ಭವಿಷ್ಯ: ಸಿದ್ದರಾಮಯ್ಯಗೆ ಕಂಟಕವಿಲ್ಲವೇ?

LEAVE A REPLY

Please enter your comment!
Please enter your name here