ಹೃದಯಾಘಾತ: ಕೆಎಂಸಿಆರ್‌ಐ ಸಿಬ್ಬಂದಿ ಸಾವು

0
29

ಹುಬ್ಬಳ್ಳಿ: ಉತ್ತರ ಕರ್ನಾಟಕ ಆರೋಗ್ಯ ಸಂಜೀವಿನಿ ಎಂದೇ ಕರೆಯಲ್ಪಡುವ ಕೆಎಂಸಿ ಆರ್‌ಐ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಗ್ರುಪ್ ಡಿ ಸಿಬ್ಬಂದಿಯೊಬ್ಬರು ಹೃದಯಾಘಾತದಿಂದ ಭಾನುವಾರ ಮೃತಪಟ್ಟಿದ್ದಾರೆ.
ಎಸ್.ಎಂ. ಕೃಷ್ಣ ನಗರದ ನಾಜೀರಾ ಹುಸೇನ್‌ಸಾಬ್ ಬಾಗವಾಲೆ (50) ಮೃತರು. ರೋಗಿಯೊಬ್ಬರನ್ನು ಮನೋರೋಗ ವಿಭಾಗದಿಂದ ತುರ್ತು ಚಿಕಿತ್ಸಾ ನಿಗಾ ಘಟಕಕ್ಕೆ ಕರೆದುಕೊಂಡು ಹೋಗುವಾಗಲೇ ಕುಸಿದು ಬಿದ್ದಿದ್ದಾರೆ. ಕೂಡಲೇ ಚಿಕಿತ್ಸೆಗೆ ಏರ್ಪಾಟು ಮಾಡಲಾಯಿತು. ಆದರೂ ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದಾರೆ ಎಂದು ವೈದ್ಯರು ಪ್ರಕಟಿಸಿದ್ದಾರೆ.
ನಾಜೀರಾ ಅವರು ಮೊಹರಂ ಹಬ್ಬ ಇದ್ದರೂ ಕರ್ತವ್ಯಕ್ಕೆ ಹಾಜರಾಗಿದ್ದರು. ಕುಟುಂಬಸ್ಥರ ಆಕ್ರಂದನ ಹೇಳತೀರದಾಗಿತ್ತು.

Previous articleಪಂಪ್‌ವೆಲ್‌ಗೆ ಒಂದು ತಿಂಗಳು ಚಿಕ್ಕಮಗಳೂರು ಪ್ರವೇಶಕ್ಕೆ ನಿಷೇಧ
Next articleಭೀಕರ ಅಪಘಾತ: ಮೂವರ ಸಾವು