ಸಂಘಗಳ ಚುನಾವಣೆಯಾಗಲು ಶಾಸಕ ಸವದಿಯೇ ಕಾರಣ

0
12

ಬಾಗಲಕೋಟೆ: ಜಿಲ್ಲೆಯ ತೇರದಾಳ ವಿಧಾನಸಭಾ ಕ್ಷೇತ್ರದ ಎಲ್ಲ ಸಹಕಾರಿ ಸಂಘಗಳು ಅದರಲ್ಲೂ ರೈತರ ಸಂಘಗಳು ಅವಿರೋಧವಾಗಿ ಆಯ್ಕೆಗೊಳ್ಳುವ ಸಂಪ್ರದಾಯ ಮೊದಲಿನಿಂದಲೂ ಇತ್ತು. ಇದೇ ಮೊದಲ ಬಾರಿಗೆ ಬನಹಟ್ಟಿಯ ಪಿಕೆಪಿಎಸ್ ಸೊಸೈಟಿಯಲ್ಲಿ ಚುನಾವಣೆಯಾಗಲು ತೇರದಾಳ ಶಾಸಕ ಸಿದ್ದು ಸವದಿಯೇ ನೇರ ಕಾರಣವೆಂದು ಬಿಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ಭೀಮಶಿ ಮಗದುಮ್ ಗಂಭೀರ ಆರೋಪ ಮಾಡಿದರು.
ಸಂಘದ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿ ಮಾತನಾಡಿದ ಅವರು, ಅವಿರೋಧ ಆಯ್ಕೆ ಮಾಡಬೇಕೆಂಬ ಎಲ್ಲ ತಯಾರಿಯಲ್ಲಿದ್ದಾಗ, ವೈಯಕ್ತಿಕವಾಗಿ ನನ್ನನ್ನು ಹೊರಹಾಕಬೇಕೆಂಬ ದುರುದ್ದೇಶದಿಂದ ಚುನಾವಣೆ ನಡೆಸಿ ಇದೇ ಮಾದರಿಯಲ್ಲಿ ಆಸಂಗಿ, ಚಿಮ್ಮಡ, ಹಣಗಂಡಿ, ಹಿಪ್ಪರಗಿ ಗ್ರಾಮಗಳಲ್ಲಿಯೂ ಚುನಾವಣೆಯ ದುಂದು ವೆಚ್ಚಕ್ಕೆ ಸವದಿಯವರೇ ಕಾರಣವೆಂದರು.
ರಾಜಕೀಯದಂತೆ ಸಹಕಾರಿ ಕ್ಷೇತ್ರದಲ್ಲಿಯೂ ಹಣ ದುರ್ಬಳಕೆಯಿಂದ ಮತ ದೊರಕಬಹುದೆಂಬ ದುರುದ್ದೇಶದಿಂದ ಸಂಧಾನ ವಿಫಲಗೊಳಿಸಿ ಚುನಾವಣೆ ನಡೆಸಿದ್ದಾರೆ.
ತಮ್ಮ ಸ್ವಗ್ರಾಮವಾದ ಹಿರೇಪಡಸಲಗಿಯಲ್ಲಿ ಓರ್ವ ಸದಸ್ಯನ ಆಯ್ಕೆ ಮಾಡಲಿ ನೋಡೋಣವೆಂದು ಮಗದುಮ್ ಸವಾಲು ಹಾಕಿದರು.
ಮುಂಬರುವ ನೇಕಾರ ಹಾಗೂ ಸಹಕಾರಿ ಸಂಘಗಳಲ್ಲಿಯೂ ಹಸ್ತಕ್ಷೇಪ ಮಾಡುವ ಮೂಲಕ ಶಾಸಕ ಸ್ಥಾನದ ದುರ್ಬಳಕೆ ನಡೆಸುವ ಎಲ್ಲ ಲಕ್ಷಣಗಳಿವೆ. ಎಚ್ಚೆತ್ತುಕೊಂಡು ಆಯಾ ನೇಕಾರ ಸಂಘಗಳು ಜಾಗೃತವಾಗಬೇಕೆಂದು ಮಗದುಮ್ ಹೇಳಿದರು.

Previous articleಹಿಪ್ಪರಗಿ ಜಲಾಶಯಕ್ಕೆ 12 ಸಾವಿರ ಕ್ಯುಸೆಕ್ ನೀರು
Next articleಅಸ್ತಿ ಪಂಜರವಾದ ಜವಳಿ ಸೇವಾ ಕೇಂದ್ರ