ಶ್ರೀ ರಾಮಲಿಂಗೇಶ್ವರ ರಥೋತ್ಸವ

0
7

ಬೀಳಗಿ : ಘಟಪ್ರಭೆಯ ತಟದಲ್ಲಿ ನೆಲೆ ನಿಂತ ಐತಿಹಾಸಿಕ ಮಹತ್ವವುಳ್ಳ ಶ್ರೀರಾಮಲಿಂಗೇಶ್ವರ ದೇವರನ್ನು ಮಹಾರಥದಲ್ಲಿ ಪ್ರತಿಷ್ಠಾಪಿಸಿ ಸೂರ್ಯನ ಹೊನ್ನಕಿರಣದ ಬೆಳಕಿನ ಸಂಧ್ಯಾಕಾಲದಲ್ಲಿ ರಥೋತ್ಸವ ಕಣ್ತುಂಬಿಕೊಳ್ಳಲು ಭಕ್ತಸಾಗರ ಕುತೂಹಲ ಶ್ರದ್ಧೆ ಭಕ್ತಿಗೆ ಕ್ಷಣಗಣನೆ ಆರಂಭವಾಗಿದೆ.
ಅಂದಾಜು ೨೭ ಅಡಿ ಎತ್ತರದ ಸುಂದರ ರಥ ಇದೇ ಮೊದಲ ಬಾರಿಗೆ ಕುಂದರಗಿ ಗ್ರಾಮದಲ್ಲಿ ನಡೆಯಲಿದ್ದು, ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲಿದೆ. ಕಲ್ಯಾಣ ಚಾಲುಕ್ಯರ ಕಾಲದ ಎರಡನೇ ಸೋಮೇಶ್ವರ ನಿರ್ಮಿಸಿದ ಎನ್ನಲಾದ ೮ ಶತಮಾನಗಳಷ್ಟು ಹಳೆಯ ದೇಗುಲವೀಗ ಗಮನ ಸೆಳೆಯುವ ಶ್ರದ್ಧಾಕೇಂದ್ರವಾಗಿದ್ದು ಅಪಾರ ಪ್ರಮಾಣದಲ್ಲಿ ಭಕ್ತರು ಕುಂದರಗಿಯತ್ತ ಧಾವಿಸುತ್ತಲಿದ್ದಾರೆ.
ಮಾಚಕನೂರು ಹೊರತು ಪಡಿಸಿದರೆ ಅಲ್ಲಿಂದ ಅನಗವಾಡಿಯವರೆಗೂ ಐತಿಹಾಸಿಕ ದೇವಾಲಯ ದೇವಾಲಯ ಮುಂಚಿನಿಂದಲೂ ಮಹತ್ವ ಪಡೆದಿದೆ. ದೇಗುಲವನ್ನು ವಿಶಿಷ್ಠ ವಿನ್ಯಾಸದಿಂದ ನಿರ್ಮಿಸಲಾಗಿದ್ದು, ತ್ರಿಕೂಟೇಶ್ವರ ದೇವಾಲಯ ಇದಾಗಿದೆ.
ಕಪ್ಪು ಬಳಪದ ಕಲ್ಲುಗಳಿಂದ ನಿರ್ಮಿತವಾದ ದೇವಸ್ಥಾನ ಅಧಿಷ್ಠಾನದ ಮೇಲೆ ತಲೆ ಎತ್ತಿದ್ದು ವಿಶೇಷ. ಒಂದು ಕಾಲದಲ್ಲಿ ಜೈನ ಪರಂಪರೆಯ ಕೇಂದ್ರವಾಗಿದ್ದು ಕುಂದರಗಿ ೧೨ ಶತಮಾನದ ನಂತರದಲ್ಲಿ ಶೈವ ಪ್ರದೇಶವಾಗಿ ಮಾರ್ಪಟ್ಟಿದ್ದು ವಿಶೇಷ.

Previous articleಪ್ರಕಾಶ ರೈ ಕಾರ್ಯಕ್ರಮಕ್ಕೆ ವಿರೋಧ: ಕಪ್ಪು ಪಟ್ಟಿ ಹಿಡಿದವರ ಬಂಧನ
Next articleವಿಜೃಂಭಣೆಯ ಮಳೆಮಲ್ಲೇಶ್ವರ ರಥೋತ್ಸವ