ಬೆಂಗಳೂರು: ವಿಧಾನಸೌಧದ ಗಾಂಧಿ ಪ್ರತಿಮೆ ಎದುರು ಪ್ರತಿಭಟನೆ ಕೈಗೊಂಡಿದ್ದ ಆ ಕ್ಷೇತ್ರದ ಶಾಸಕ ಮುನಿರತ್ನ ಅವರು ಪ್ರತಿಭಟನೆಯನ್ನು ಕೈಬಿಟ್ಟಿದ್ದಾರೆ. ಮಾಜಿ ಸಿಎಂ ಯಡಿಯೂರಪ್ಪ ಮುನಿರತ್ನ ಅವರ ಮನವೊಲಿಸಿ ಪ್ರತಿಭಟನೆಯನ್ನು ಕೈಬಿಡುವಂತೆ ಸೂಚನೆ ನೀಡಿದ್ದು, ನಿಮ್ಮ ಪರವಾಗಿ ಬಿಜೆಪಿ ಇರಲಿದೆ ಎಂಬ ಅಭಯವನ್ನು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಮುನಿರತ್ನ ಪ್ರತಿಭಟನೆಯನ್ನು ಕೈಬಿಟ್ಟಿದ್ದಾರೆ, ಪ್ರತಿಭಟನೆ ಕೈಬಿಟ್ಟ ಬಳಿಕ ಮಾತನಾಡಿದ ಶಾಸಕ ಮುನಿರತ್ನ, ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರು ನನ್ನ ಬೆಂಬಲಕ್ಕೆ ಇರುವುದಾಗಿ ಹೇಳಿದ್ದಾರೆ. ಪಕ್ಷ ನನ್ನ ಜತೆ ಇದೆ. ಧರಣಿ ಕೈಬಿಡುವಂತೆ ಸೂಚಿಸಿದರು. ಅವರ ಸೂಚನೆ ಮೇರೆಗೆ ಧರಣಿಯನ್ನು ಕೈ ಬಿಡುತ್ತಿದ್ದೇನೆ ಎಂದು ಹೇಳಿದರು.