ನಿಯಂತ್ರಣ ತಪ್ಪಿ ಕೆರೆಗೆ ಬಿದ್ದ ಬೈಕ್‌: ಯುವಕ ಸಾವು, ಯುವತಿ ಪಾರು

0
15

ಹೊಸಪೇಟೆ: ಬೈಕ್ ನಿಯಂತ್ರಣ ತಪ್ಪಿ ಕೆರೆಗೆ ಬಿದ್ದು ಯುವಕ ಮೃತಪಟ್ಟಿದ್ದು, ಯುವತಿ ಪ್ರಾಣಾಪಾಯದಿಂದ ಪಾರಾದ ಘಟನೆ ತಾಲೂಕಿನ ಕಮಲಾಪುರ ಕೆರೆ ಏರಿ ಬಳಿಯಲ್ಲಿ ನಡೆದಿದೆ.

ಮರಿಯಮ್ಮನ ಹಳ್ಳಿಯ ನಿವಾಸಿ ರವಿಕುಮಾರ್(28) ಮೃತಪಟ್ಟಿದ್ದಾನೆ. ಯುವತಿಯ ಗುರುತು ಪತ್ತೆಯಾಗಿಲ್ಲ. ಹೊಸಪೇಟೆಯಿಂದ ಕಮಲಾಪುರದ ಕಡೆಗೆ ಬೈಕ್‌ನಲ್ಲಿ ಹೊರಟಿದ್ದ ಸಂದರ್ಭದಲ್ಲಿ ಯುವಕ, ಯುವತಿ ಬೈಕ್ ನಿಯಂತ್ರಣ ತಪ್ಪಿ ಕೆರೆಯಲ್ಲಿ ಬಿದ್ದಿದ್ದಾರೆ. ಸ್ಥಳೀಯರು, ಅಗ್ನಿಶಾಮಕ ದಳ ಸಿಬ್ಬಂದಿ ಯುವಕನ ಮೃತದೇಹ ಹೊರ ತೆಗೆದಿದ್ದಾರೆ. ಈ ಕುರಿತು ಕಮಲಾಪುರ ಪೊಲೀಸ್ ಠಾಣೆಯಲ್ಲಿ  ಪ್ರಕರಣ ದಾಖಲಾಗಿದೆ.

Previous articleವಿಧಾನ ಪರಿಷತ್‌ ಸ್ಥಾನಕ್ಕೆ ಉಮಾಶ್ರೀ, ಸೀತಾರಾಮ್, ಸುಧಾಮ್ ದಾಸ್ ಹೆಸರಿಗೆ ಅನುಮೋದನೆ
Next articleಸೇನಾ ವಾಹನ ಪಲ್ಟಿ: 9 ಸೈನಿಕರ ದುರ್ಮರಣ