ಬೈರಮಂಗಲ ಮತ್ತು ಕಂಚುಗಾರನಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ಜಿಬಿಎ ಎಐ ಸಿಟಿ ನಿರ್ಮಾಣಕ್ಕೆ ಸರ್ಕಾರ ಭೂಸ್ವಾಧೀನಕ್ಕೆ ಮುಂದಾಗಿರುವುದಕ್ಕೆ ರೈತರು ವಿರೋಧ ವ್ಯಕ್ತಪಡಿಸಿದರು.ಭೂಮಿ ಇಲ್ಲದೆ ರಾಗಿ, ಭತ್ತ ಬೆಳೆಯಲು ಸಾಧ್ಯವೇ? ದೇವನಹಳ್ಳಿ ಮಾದರಿ ಹೋರಾಟ ಅಗತ್ಯ: ಕುಮಾರಸ್ವಾಮಿ
ತಾಲೂಕಿನ ಬಿಡದಿ ಹೋಬಳಿ ಬೈರಮಂಗಲದಲ್ಲಿ ನಡೆಯುತ್ತಿರುವ ಭೂಸ್ವಾಧೀನ ವಿರುದ್ಧದ ಪ್ರತಿಭಟನೆಯಲ್ಲಿ ರೈತ ಮುಖಂಡ ಕುಮಾರಸ್ವಾಮಿ ಮಾತನಾಡಿ, ಈ ಹೋರಾಟಕ್ಕೆ ಈ ಭಾಗದ ಶಾಸಕರಾದ ಆದರೆ ಎಚ್.ಸಿ.ಬಾಲಕೃಷ್ಣ ನೇತೃತ್ವವಹಿಸಬೇಕಾಗಿತ್ತು. ಅವರು ಸಹೋದರರ ಜೊತೆ ಸೇರಿ ಬಾಲಕೃಷ್ಣ ಸಹ ಸಹೋದರರಂತೆ ಆಗಿಬಿಟ್ಟಿದ್ದಾರೆಂದು ಪರೋಕ್ಷವಾಗಿ ಡಿ.ಕೆ.ಸಹೋದರರ ವಿರುದ್ಧ ಗುಡುಗಿದರು.
ಬೈರಮಂಗಲ, ಕಂಚುಗಾರನಹಳ್ಳಿ ಗ್ರಾಪಂ ವ್ಯಾಪ್ತಿಯ ಗ್ರಾಮಗಳಲ್ಲಿ ತಿಂಗಳಿಗೆ 6 ಲಕ್ಷ ಲೀಟರ್‌ಗೂ ಹೆಚ್ಚು ಹಾಲು ಉತ್ಪಾದನೆಯಾಗುತ್ತಿದೆ. ಎರಡೂವರೆ ಸಾವಿರ ಎಕರೆ ಭೂಮಿಯಲ್ಲಿ ರೇಷ್ಮೆ ಕೃಷಿ ನಡೆಯುತ್ತಿದೆ. 5 ಲಕ್ಷಕ್ಕೂ ಅಧಿಕ ಸಂಖ್ಯೆಯ ತೆಂಗಿನ ಮರಗಳಿವೆ. ಬಾಳೆ ಕೃಷಿ ಫಲವತ್ತಾಗಿದೆ. ಕೃಷಿ ಮತ್ತು ತೋಟಗಾರಿಕೆ ಬೆಳೆಗಳಿಗೆ ಸೂಕ್ತವಾಗಿರುವ ಇಂತಹ ಭೂಮಿಯನ್ನು ಕಬಳಿಸಲು ಬಿಡೋಲ್ಲ ಎಂದು ಗುಡುಗಿದರು.
ಎಐ ಸಿಟಿ ನಿರ್ಮಾಣವಾದ ನಂತರ ಅಲ್ಲಿ ರಾಗಿ, ಭತ್ತ ಬೆಳೆಯಲು ಸಾಧ್ಯವೇ? ಹೈನುಗಾರಿಕೆ ಸಾಧ್ಯವೇ. ಇಲ್ಲಿ ಎಐ ಸಿಟಿಗೆ ನಿರ್ಮಾಣಕ್ಕೆ ಒಂದಿಂಚು ಭೂಮಿಯ ಸ್ವಾಧೀನಕ್ಕೆ ಬಿಡುವುದಿಲ್ಲ, ಭೂಸ್ವಾಧೀನದ ವಿಚಾರದಲ್ಲಿ ಜನಾಂದೋಲನ ರೂಪುಗೊಳ್ಳಬೇಕಾಗಿದೆ ಎಂದು ಕರೆ ನೀಡಿದರು.ಎಐ ತಂತ್ರಜ್ಞಾನ ಮತ್ತು ಅದನ್ನು ಅಭಿವೃದ್ಧಿಪಡಿಸುವ ಸಂಸ್ಥೆಗಳು ಅಗತ್ಯವಿದೆ ನಿಜ. ಆದರೆ ಫಲವತ್ತಾದ ಭೂಮಿಯಲ್ಲೇ ಏಕೆ? ಗೋಮಾಳ ಸೇರಿದಂತೆ ಸರ್ಕಾರದ ಸುಪರ್ದಿನಲ್ಲಿರುವ ಭೂಮಿಯಲ್ಲಿ ಎಲ್ಲಾ ಮೂಲ ಸೌಕರ್ಯಗಳನ್ನು ಕೊಟ್ಟು ಈ ಯೋಜನೆ ಜಾರಿಗೊಳಿಸಲಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದ ಅವರು ರೈತರ ವಿರೋಧದ ನಡುವೆಯೂ ಭೂಸ್ವಾಧೀನಕ್ಕೆ ಡಿ.ಕೆ.ಶಿವಕುಮಾರ್ ಮುಂದಾಗಿದ್ದಾರೆ.
ಬಹುಶಃ ಯೋಜನೆಯ ಮೂಲಕ 5 ಸಾವಿರ ಕೋಟಿ ಹಣ ಮಾಡಿ ತಮ್ಮ ಪಕ್ಷದ ಹೈಕಮಾಂಡ್‌ಗೆ ಕೊಡಲು ಯೋಜನೆಯ ಪರ ನಿಂತಿದ್ದಾರಾ ಎಂದು ಅನುಮಾನವ್ಯಕ್ತಪಡಿಸಿದರು. ಜಿಬಿಎ ಎಐ ಸಿಟಿ ನಿರ್ಮಾಣಕ್ಕೆ ಭೂಸ್ವಾಧೀನ ತಡೆಯಲು ದೇವನಹಳ್ಳಿ ಮಾದರಿಯ ಹೋರಾಟದ ಅಗತ್ಯವಿದೆ. ದೇವನಹಳ್ಳಿಯಲ್ಲಿ ಸರ್ಕಾರ ವಿವಿಧ ಯೋಜನೆಗಳಿಗೆ ಭೂಸ್ವಾಧೀನಕ್ಕೆ ಮುಂದಾದಾಗ ಎಲ್ಲಾ ಸಂಘಟನೆಗಳು ಒಂದಾಗಿ ವಿರೋಧ ವ್ಯಕ್ತಪಡಿಸಿದರು. ಎಐ ಸಿಟಿ ಭೂಸ್ವಾಧೀನವಿಚಾರದ ಹೋರಾಟ ಜನಾಂದೋಲ ಸ್ವರೂಪ ಪಡೆಯಬೇಕು ಆಗ ಮಾತ್ರ ಸರ್ಕಾರ ಹಿಂದ ಸರಿಯಬಹುದು. ಇಲ್ಲದಿದ್ದರೆ ಡಿ.ಕೆ.ಶಿವಕುಮಾರ್ ಅವರಂತಹ ಪ್ರಭಾವಿಗಳು ರೈತರನ್ನು ಹೆದರಿಸಿ, ಬೆದರಿಸಿ ರೈತರಿಂದ ಭೂಸ್ವಾಧೀನ ಮಾಡಿಕೊಳ್ಳುತ್ತಾರೆಂದು ಆತಂಕ ವ್ಯಕ್ತಪಡಿಸಿದರು.
ರೈತ ಸಂಘದ ಜಿಲ್ಲಾಧ್ಯಕ್ಷ ಮಲ್ಲಯ್ಯ, ಪ್ರಮುಖರಾದ ಚೀಲೂರು ಮುನಿರಾಜು, ತಿಮ್ಮೇಗೌಡ, ರೈತ ಸಂಘದ ರಾಜ್ಯ ಸಮಿತಿ ಸದಸ್ಯ ಕೃಷ್ಣಯ್ಯ, ಜಿಲ್ಲಾ ಮಹಿಳಾ ರೈತ ಘಟಕದ ಅಧ್ಯಕ್ಷೆ ರತ್ನಮ್ಮ, ಮಾಗಡಿ ತಾಲೂಕು ಘಟಕದ ಅಧ್ಯಕ್ಷ ಲೋಕೇಶ್, ಚನ್ನಪಟ್ಟಣ ತಾಲೂಕು ಘಟಕದ ಅಧ್ಯಕ್ಷ ವಿಜಯ್ ಕುಮಾರ್, ಕಾರ್ಯದರ್ಶಿ ವೆಂಕಟೇಶ್, ಹಾರೋಹಳ್ಳಿ ತಾಲೂಕು ಘಟಕದ ಅಧ್ಯಕ್ಷ ಕುಮಾರ್, ದಲಿತ ಸೇನೆ ಜಿಲ್ಲಾಧ್ಯಕ್ಷ ಕಿರಣ್ ಮತ್ತಿತರರಿದ್ದರು. ರೈತರು ಮತ್ತು ವಿವಿಧ ಸಂಘಟನೆಗಳ ಪದಾಧಿಕಾರಿಗಳು 150ಕ್ಕೂ ಬೈಕ್‌ಗಳ ರ್ಯಾಲಿ ನಡೆಸಿದರು. ನಗರದ ಎಪಿಎಂಸಿ ಯಾರ್ಡ್ ಬಳಿಯಿಂದ ಸುಮಾರು


























