ಕುಗ್ರಾಮದಲ್ಲೂ ಆರೋಗ್ಯ ಸೇವೆ ನೀಡಿದ ವೈದ್ಯರುಗಳಿಗೆ ಸನ್ಮಾನ

0
79

ದಾಂಡೇಲಿ: ಜೋಯಡಾ ತಾಲೂಕಿನ ಕಾಡಿನ ಮಧ್ಯೆ ಇರುವ ಕುಗ್ರಾಮಗಳಲ್ಲಿರುವ ಜನರಿಗೆ ಆರೋಗ್ಯ ಸೇವೆ ನೀಡುತ್ತಿರುವ 12 ವೈದ್ಯರನ್ನು ಸ್ಥಳೀಯ ಸಂಜೀವಿನ ಸೇವಾ ಟ್ರಸ್ಟ್ ವತಿಯಿಂದ ಜೂನ್ 30ರ ಮಧ್ನಾಹ್ನ ಅವರ ಸೇವೆಯನ್ನು ಸ್ಮರಿಸಿ ಸನ್ಮಾನಿಸಲಾಯಿತು. ಈ ಸಂಧರ್ಭದಲ್ಲಿ ಮಾತನಾಡಿದ ಸಂಸ್ಥಾಪಕ ಅಧ್ಯಕ್ಷ ರವಿ ರೇಡಕರ ಅವರು ಯಾವುದೇ ಮೂಲಭೂತ ಸೌಕರ್ಯಗಳಿಲ್ಲದ ತಾಲೂಕಿನ ಕುಗ್ರಾಮಗಳ ಗ್ರಾಮಸ್ಥರಿಗೆ ಆರೋಗ್ಯ ಸೇವೆ ಸಲ್ಲಿಸಿರುವ ಇಂತಹ ವೈದ್ಯರನ್ನು ಗುರುತಿಸಿ ಅವರ ಕಾರ್ಯಕ್ಕೆ ಪ್ರೋತ್ಸಾಹ ನೀಡುವದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು. ಈ ಸಂಧರ್ಭದಲ್ಲಿ ತಾಲೂಕಾ ವೈದ್ಯಾಧಿಕಾರಿ ಡಾ.ವಿಜಯ ಕೊಚ್ಚರ್ಗಿ, ಹಿರಿಯ ವೈದ್ಯರಾದ ಡಾ. ಮಾದಣ್ಣವರ,ಡಾ.ಹಬೀಬುಲ್ಲಾ ಖಾನ್, ಡಾ. ವಿದ್ಯಾವತಿ,ಡಾ.ಅನಿಲಕುಮಾರ, ಡಾ. ಭರತ,ಡಾ. ನೀಲಕಂಠ, ಡಾ. ಸಾಜಿದ್, ಡಾ. ದೀಪಾ, ಡಾ.ಸದಾಶಿವ,ಡಾ.ಗೀತಾ ಅವರನ್ನು ಟ್ರಸ್ಟಿನ ಅಧ್ಯಕ್ಷರಾದ ಸುನೀಲ ದೇಸಾಯಿ ಸನ್ಮಾನಿಸಿ ಗೌರವಿಸಿದರು.

Previous articleಸೋತವರು ಸುಳ್ಳು ಹೇಳಿಕೊಂಡು ತಿರುಗುತ್ತಿದ್ದಾರೆ
Next articleಶಾಲಾ ಕಟ್ಟಡದ ಮೇಲ್ಬಾವಣಿ ಕುಸಿತ : ತಪ್ಪಿದ ಭಾರೀ ಅನಾಹುತ