Home News ಕುಗ್ರಾಮದಲ್ಲೂ ಆರೋಗ್ಯ ಸೇವೆ ನೀಡಿದ ವೈದ್ಯರುಗಳಿಗೆ ಸನ್ಮಾನ

ಕುಗ್ರಾಮದಲ್ಲೂ ಆರೋಗ್ಯ ಸೇವೆ ನೀಡಿದ ವೈದ್ಯರುಗಳಿಗೆ ಸನ್ಮಾನ

ದಾಂಡೇಲಿ: ಜೋಯಡಾ ತಾಲೂಕಿನ ಕಾಡಿನ ಮಧ್ಯೆ ಇರುವ ಕುಗ್ರಾಮಗಳಲ್ಲಿರುವ ಜನರಿಗೆ ಆರೋಗ್ಯ ಸೇವೆ ನೀಡುತ್ತಿರುವ 12 ವೈದ್ಯರನ್ನು ಸ್ಥಳೀಯ ಸಂಜೀವಿನ ಸೇವಾ ಟ್ರಸ್ಟ್ ವತಿಯಿಂದ ಜೂನ್ 30ರ ಮಧ್ನಾಹ್ನ ಅವರ ಸೇವೆಯನ್ನು ಸ್ಮರಿಸಿ ಸನ್ಮಾನಿಸಲಾಯಿತು. ಈ ಸಂಧರ್ಭದಲ್ಲಿ ಮಾತನಾಡಿದ ಸಂಸ್ಥಾಪಕ ಅಧ್ಯಕ್ಷ ರವಿ ರೇಡಕರ ಅವರು ಯಾವುದೇ ಮೂಲಭೂತ ಸೌಕರ್ಯಗಳಿಲ್ಲದ ತಾಲೂಕಿನ ಕುಗ್ರಾಮಗಳ ಗ್ರಾಮಸ್ಥರಿಗೆ ಆರೋಗ್ಯ ಸೇವೆ ಸಲ್ಲಿಸಿರುವ ಇಂತಹ ವೈದ್ಯರನ್ನು ಗುರುತಿಸಿ ಅವರ ಕಾರ್ಯಕ್ಕೆ ಪ್ರೋತ್ಸಾಹ ನೀಡುವದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು. ಈ ಸಂಧರ್ಭದಲ್ಲಿ ತಾಲೂಕಾ ವೈದ್ಯಾಧಿಕಾರಿ ಡಾ.ವಿಜಯ ಕೊಚ್ಚರ್ಗಿ, ಹಿರಿಯ ವೈದ್ಯರಾದ ಡಾ. ಮಾದಣ್ಣವರ,ಡಾ.ಹಬೀಬುಲ್ಲಾ ಖಾನ್, ಡಾ. ವಿದ್ಯಾವತಿ,ಡಾ.ಅನಿಲಕುಮಾರ, ಡಾ. ಭರತ,ಡಾ. ನೀಲಕಂಠ, ಡಾ. ಸಾಜಿದ್, ಡಾ. ದೀಪಾ, ಡಾ.ಸದಾಶಿವ,ಡಾ.ಗೀತಾ ಅವರನ್ನು ಟ್ರಸ್ಟಿನ ಅಧ್ಯಕ್ಷರಾದ ಸುನೀಲ ದೇಸಾಯಿ ಸನ್ಮಾನಿಸಿ ಗೌರವಿಸಿದರು.

Exit mobile version