ಧಾರವಾಡ: ರೈತರ ಆಶಾಕಿರಣವಾದ ಕಲಘಟಗಿಯ ಬಸವಾ ಇಂಡಸ್ಟ್ರೀಜ್

0
29

ಧಾರವಾಡ: ರೈತ ಕುಟುಂಬದಿಂದಲೇ ಬಂದಿರುವ ಸಚಿನ ಬಡಿಗೇರ ಕೃಷಿಯಲ್ಲಿ ರೈತರ ಎದುರಿಸುವ ಸಮಸ್ಯೆಗಳನ್ನು ಅರಿತು ಅವರಿಗೆ ಏನಾದರೂ ಅನುಕೂಲ ಮಾಡಬೇಕೆಂದು ನಿರ್ಣಯಿಸಿ ಕೃಷಿ ಪರಿಕರ ಸಿದ್ಧಪಡಿಸಲು ಮುಂದಾಗಿ ಬಸವಾ ಇಂಡಸ್ಟ್ರೀಜ್ ಪ್ರಾರಂಭಿಸಿದರು. ಇದರ ಫಲವೇ ಬಹು ಉಪಯೋಗಿ ರೈತ ಉಪಕರಣಗಳು ಕೃಷಿ ಮೇಳದಲ್ಲಿ ರೈತರನ್ನು ಆಕರ್ಷಿಸುತ್ತಿವೆ.

ಹೌದು… ಕಲಘಟಗಿ ತಾಲೂಕಿನ ಹಿರೇಹೊನ್ನಳ್ಳಿ ಗ್ರಾಮದ ಸಚಿನ ಬಡಿಗೇರ ತಮ್ಮ ತಂದೆಯಾದ ದ್ಯಾಮಣ್ಣ ಬಡಿಗೇರ ಅವರೊಂದಿಗೆ ಸೇರಿಕೊಂಡು ಪ್ರಾರಂಭದಲ್ಲಿ ದೀಪದ ಸ್ಟ್ಯಾಂಡ್ ಸಿದ್ಧಪಡಿಸಿ ದೇವಸ್ಥಾನಗಳಿಗೆ ಪೂರೈಕೆ ಮಾಡಿದರು. ಇದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಜನರು ಖರೀದಿ ಮಾಡಿ ದೇವಸ್ಥಾನಗಳಿಗೆ ದೇಣಿಗೆಯಾಗಿ ನೀಡಲು ಖರೀದಿಸಿದರು. ಇದಾದ ಬಳಿಕ ಇಬ್ಬರಿಂದ ಪ್ರಾರಂಭವಾದ ಇಂಡಸ್ಟ್ರಿ ಈಗ 45 ಜನ ಸಿಬ್ಬಂದಿಯೊಂದಿಗೆ ಯಶಸ್ವಿಯಾಗಿ ನಡೆಯುತ್ತಿದ್ದು, ರೈತರಿಗೆ ರಾಶಿ ಸಂದರ್ಭದಲ್ಲಿ ಅನುಕೂಲವಾಗಲಿ ಎಂಬ ಉದ್ದೇಶದಿಂದ ಮಣಕಾಳು ಸಾಣಿಗೆ ಸಿದ್ಧಪಡಿಸಿದರು. ಇದರಲ್ಲಿ ರೈತರು ವಿವಿಧ ಕಾಳುಗಳನ್ನು ಹಾಕಿದರೆ ಅದರಲ್ಲಿಯ ಕಸ, ಮಣ್ಣು ಬೇರೆಯಾಗಿ ಕಾಳುಗಳು ಮಾತ್ರ ಪ್ರತ್ಯೇಕವಾಗಿ ದೊರೆಯುವ ತಂತ್ರಜ್ಞಾನ ಅಳವಡಿಸಿದ್ದು ವಿಶೇಷವಾಗಿತ್ತು.

ಇದಾದ ಬಳಿಕ ಹರಗುವ ಕುಂಟಿ, ದಿಂಡಿನ ಕುಂಟೆ, ಬಲರಾಮ ಕುಂಟಿ, ಬೋರವೆಲ್ ಲಿಫ್ಟರ್, ಟ್ರ್ಯಾಕ್ಟರ್ ಟ್ಯಾಂಕರ್, ಮಲ್ಟಿ ಕ್ರಾಫ್ಟ್ ರಾಶಿ ಮಷಿನ್ ಹೀಗೆ ಹತ್ತಾರು ಬಗೆಯ ಯಂತ್ರೋಪಕರಣಗಳನ್ನು ಸಿದ್ಧಪಡಿಸಿ ತಮ್ಮದೇ ಆದ ಬಸವಾ ಬ್ರ್ಯಾಂಡ್‌ನಲ್ಲಿ ಅತ್ಯಂತ ಕಡಿಮೆ ದರದಲ್ಲಿ ಮಾರಾಟಕ್ಕೆ ಮುಂದಾಗಿದ್ದಾರೆ.

ಉತ್ಕೃಷ್ಟ ಗುಣಮಟ್ಟ: ಬೆಳೆಯುತ್ತಿರುವ ತಂತ್ರಜ್ಞಾನಕ್ಕೆ ತಕ್ಕಂತೆ ಬಸವಾ ಇಂಡಸ್ಟ್ರೀಜ್ ಸಹ ತನ್ನ ಕೃಷಿ ಸಲಕರಣೆಗಳ ತಯಾರಿಕೆಯಲ್ಲಿ ನಾವಿನ್ಯತೆ ಮೈಗೂಡಿಸಿಕೊಂಡಿದ್ದು, ಇತ್ತೀಚಿನ ದಿನಗಳಲ್ಲಿ ರೈತರ ಕಟಾವಿನಲ್ಲಿ ಅನುಕೂಲವಾಗುವ ನಿಟ್ಟಿನಲ್ಲಿ ಉತ್ಕೃಷ್ಟ ಗುಣಮಟ್ಟದ ಕಾಳು ಸ್ವಚ್ಛಗೊಳಿಸುವ ಯಂತ್ರ, ರೋಟಾವೇಟರ್, ನೇಗಿಲು, ಕೂರಿಗೆ, ಚಾಪಕಟ್ಟಿಂಗ್ ಮಶಿನ್, ರಾಶಿ ಮಷಿನ್ ಹೀಗೆ ವಿವಿಧ ಬಗೆಯ ಯಂತ್ರೋಪಕರಣಗಳನ್ನು ಸಿದ್ಧಪಡಿಸಿದ್ದು, ಬಲಿಷ್ಟ ಶಕ್ತಿ, ದೀರ್ಘ ಕಾಲ ಬಾಳಿಕೆ, ಕಡಿಮೆ ನಿರ್ವಹಣೆ ವೆಚ್ಚ, ಸೇವಾ ಸೌಲಭ್ಯ ಹಾಗೂ ಸರಳ ಬಳಕೆ ವಿಧಾನವನ್ನು ಹೊಂದಿವೆ.

ರೈತರಿಗೆ ಶ್ರೇಷ್ಠವಾದ ಉತ್ತಮ ಗುಣಮಟ್ಟದ ಕೃಷಿ ಉಪಕರಣಗಳನ್ನು ತಯಾರಿಸುತ್ತಾ ಹೆಚ್ಚಿದ ಲಾಭಕ್ಕೆ ಒತ್ತು ಕೊಡದೆ ರೈತರ ಸೇವೆಗೆ ಅತಿ ಹೆಚ್ಚಿನ ಮುತುವರ್ಜಿ ವಹಿಸಿ ನಮ್ಮನ್ನು ನಾವು ತೊಡಗಿಸಿಕೊಂಡಿದ್ದೇವೆ ಎನ್ನುತ್ತಾರೆ ಬಸವಾ ಇಂಡಸ್ಟ್ರೀಜ್ ಮಾಲೀಕ ದ್ಯಾಮಣ್ಣ ಬಡಿಗೇರ. ರೈತ ಬಾಂಧವರ ಸಹಕಾರವೇ ನಮಗೆ ಆಶೀರ್ವಾದ ಅವರ ಬೆಂಬಲದಿಂದ ನಾವು ಮುನ್ನಡೆಯುತ್ತಿದ್ದು, ಪ್ರತಿ ವರ್ಷ ಕೃಷಿ ಮೇಳದಲ್ಲಿ ಬಸವಾ ಇಂಡಸ್ಟ್ರೀಜ್ ಬರುವುದನ್ನೇ ರೈತರು ಕಾಯುತ್ತಿರುವಂತೆ ಆಗಿದೆ.

ರೈತರಿಗೆ ವಿಶೇಷವಾಗಿ ಬಿತ್ತನೆಯ ಸಂದರ್ಭದಲ್ಲಿ ಒಂದು ಉತ್ತಮ ಗುಣಮಟ್ಟದ ಕೃಷಿ ಉಪಕರಣ ಕೂರಿಗೆ ಬಹು ಪ್ರಾಮುಖ್ಯತೆ ಇರುತ್ತದೆ. ಅದಕ್ಕೆ ತಕ್ಕ ಹಾಗೆ ಬಸವಾ ಇಂಡಸ್ಟ್ರೀಜ್ ರೈತರಿಗೆ ಅನುಕೂಲಕರವಾದ ಬಸವಾ ಕೂರಿಗೆ, ರೋಟಾವೇಟರ್, ಚಾಪ್ ಕಟ್ಟಿಂಗ್ ಯಂತ್ರ, ರಾಶಿ ಯಂತ್ರಗಳನ್ನು ಸಿದ್ಧಪಡಿಸಿ ಬಹುಖ್ಯಾತಿ ಪಡೆದಿದ್ದಾರೆ. ಆಸಕ್ತ ರೈತರು ಮೊ. 9035269681, 9035269682 ಅಥವಾ 9035269685ಗೆ ಸಂಪರ್ಕಿಸಿ ಮಾಹಿತಿ ಪಡೆಯಬಹುದು ಎಂದಿದ್ದಾರೆ.

ರೈತರ ಸೇವೆ: “ಸಣ್ಣ ಪ್ರಮಾಣದಲ್ಲಿ ಯಂತ್ರೋಪಕರಣ ಸಿದ್ಧತೆ ಪ್ರಾರಂಭಿಸಿದೆ. ಈಗ ರೈತರ ಸಹಾಯ-ಸಹಕಾರ ಹಾಗೂ ನಂಬಿಕೆಯಿಂದ ಇಷ್ಟು ದೊಡ್ಡ ಮಟ್ಟದಲ್ಲಿ ಬೆಳೆದಿದ್ದೇನೆ. ಇದನ್ನು ರೈತರ ಸೇವೆ ಎಂದು ಪರಿಗಣಿಸಿ ಮಾಡುತ್ತಿದ್ದೇನೆ” ಎಂದು ಬಸವಾ ಇಂಡಸ್ಟೀಜ್‌ನ ಸಚಿನ ಬಡಿಗೇರ ಹೇಳಿದರು.

Previous articleಕಲ್ಯಾಣ ಕರ್ನಾಟಕದಲ್ಲಿ ಮತ್ತೆ ಮಳೆಯ ಅಬ್ಬರ, ಜನಜೀವನ ತತ್ತರ

LEAVE A REPLY

Please enter your comment!
Please enter your name here