ಚಿಕ್ಕಮಗಳೂರು: ಪೆಹಲ್ಗಾಮ್ ದಾಳಿ, ಮತ ಕಳ್ಳತನದ ಬಗ್ಗೆ ಚರ್ಚೆಗಳು ಆರಂಭವಾದಾಗ ಜನರಿಗೆ ದಾರಿ ತಪ್ಪಿಸಲು ಜಾತಿ ಗಣತಿ ಮಾಡುತ್ತೇವೆ ಎಂದು ಹೇಳಿದ್ದು ಕೇಂದ್ರ ಸರ್ಕಾರ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಆಕ್ರೋಶ ವ್ಯಕ್ತಪಡಿಸಿದರು.
ಚಿಕ್ಕಮಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಅವರು, ರಾತ್ರಿ ಮಲಗಿದ್ದವರಿಗೆ ಎಚ್ಚರವಾದಾಗ ಎದ್ದು ಬಂದು ನಾವು ಓಬಿಸಿ ಜಾತಿಗಣತಿ ಮಾಡುತ್ತೇವೆ ಎಂದು ಹೇಳಿದ್ದರೆಂದು ತಿಳಿಸಿದರು.
ಮತಾಂತರ ನಮ್ಮ ಹಕ್ಕು, ನಾವು ಮತ್ತೆ ನಮ್ಮ ಧರ್ಮಕ್ಕೆ ವಾಪಸ್ಸಾಗಬಹುದು, ಬಹಳಷ್ಟು ಜನ ಜಾತಿ ಗಣತಿ ಅಂತಾರೆ, ಶೈಕ್ಷಣಿಕವಾಗಿ ಹೋದಾಗ ಅದೊಂದು ಪ್ಯಾರಾಮೀಟರ್. 60ರಲ್ಲಿ 58 ಪ್ಯಾರಾ ಮೀಟರ್ ಬಿಟ್ಟಿದ್ದಾರೆ. ನೀವೆಲ್ಲಾ ಜಾತಿಗಣತಿ ಅಂತೀರಾ, ಜಾತಿಗಣತಿ ಅಲ್ಲ, ಓಬಿಸಿ ಜಾತಿಗಣತಿ ಮಾಡುತ್ತೇವೆ ಎಂದು ಹೇಳಿದ್ದು ಕೇಂದ್ರ ಸರ್ಕಾರವೇ ಎಂದರು.
ಆಗ ಅವರು ಯಾವ ಜಾತಿಯನ್ನೂ ಒಡೆಯಲಿಲ್ಲ, ಕೇಂದ್ರ ಸರ್ಕಾರ ಆಲ್ ಓವರ್ ಇಂಡಿಯಾ ಮಾಡೋದು ಜಾತಿ ಹೊಡೆತ ಅಲ್ಲ, ನಾವು ಮಾಡಿದ್ದರೆ ಜಾತಿ ಹೊಡೆತವಾ? ಎಂದರು.
ಕಾಂಗ್ರೆಸ್ ಇರುವಲ್ಲಿ ಕಾಲು ಕೆರೆದು ಜಗಳ ಮಾಡಲು ಮುಂದಾಗುತ್ತಾರೆ. ಯಾಕೆ ಕಾಂಗ್ರೆಸ್ಸಿಗರಿಗೆ ತೊಂದರೆ ಕೊಡುವುದನ್ನು ಬಿಟ್ಟರೆ ಬಿಜೆಪಿಯವರಿಗೆ ಬೇರೆ ಏನಿದೆ ಹೇಳಿ? ಎಂದು ಪ್ರಶ್ನಿಸಿದರು.