ಬಾಗಲಕೋಟೆ: 5,71,001 ರೂ.ಗೆ ಮಾಳಿಂಗರಾಯ ಗದ್ದುಗೆ ತೆಂಗಿನಕಾಯಿ ಹರಾಜು

0
35

ಬಾಗಲಕೋಟೆ: ಜಮಖಂಡಿ ತಾಲೂಕಿನ ಚಿಕ್ಕಲಕಿ ಗ್ರಾಮದಲ್ಲಿ ನಡೆದ ಮಾಳಿಂಗರಾಯ ಜಾತ್ರೆಯಲ್ಲಿ ಮಾಳಿಂಗರಾಯ ಗದ್ದುಗೆಯ ತೆಂಗಿನಕಾಯಿ ದಾಖಲೆ ಮೊತ್ತಕ್ಕೆ ಹರಾಜು ಆಗಿದೆ.

ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ತಿಕೋಟಾ ಗ್ರಾಮದ ಭಕ್ತನರಾದ ಮಾಹಾವೀರ ಹರಕೆಯವರು ಹರಾಜಿನಲ್ಲಿ ಈ ತೆಂಗಿನಕಾಯಿಯನ್ನು 5,71,001 ರೂ.ಗೆ ಪಡೆದುಕೊಂಡರು. ಈ ತೆಂಗಿನಕಾಯಿಯನ್ನು ಪಡೆಯಲು ತ್ರಿಕೋನ ಸ್ಪರ್ಧೆ ಏರ್ಪಟ್ಟಿತ್ತು. ಮೂವರಲ್ಲಿ ಇನ್ನಿಬ್ಬರು ಚಿಕ್ಕಲಕಿ ಗ್ರಾಮದ ಮುದುಕಪ್ಪ ಮಾಳಪ್ಪ ಪಟೇದ್ದಾರ ಮತ್ತು ಗೋಠೆ ಗ್ರಾಮದ ಸದಾಶಿವ ಮೈಗೂರರವರ ಮಧ್ಯೆ ಸ್ಪರ್ಧೆ ಏರ್ಪಟ್ಟಿತ್ತು.

ತೆಂಗಿನಕಾಯಿಯ ವಿಶೇಷ : ಮಹಿಮಾಂತ ಮಾಳಿಂಗರಾಯ ದೇವರ ಗದ್ದುಗೆ ಮೇಲೆ ಈ ತೆಂಗಿನಕಾಯಿಯನ್ನು ಶ್ರಾವಣ ಮಾಸದ ಒಂದು ತಿಂಗಳ ಕಾಲ ಪೂಜಿಸಲಾಗಿರುತ್ತದೆ. ಇದೇ ಕಾಯಿಯನ್ನು ಹಿಂದೊಮ್ಮೆ ಮಾಹಾವೀರ ಹರಕೆಯವರು ಹರಾಜಿನಲ್ಲಿ 6,50,001 ರೂಪಾಯಿಗೆ ಪಡೆದುಕೊಂಡಿದ್ದರು.

ಈ ಸಂದರ್ಭದಲ್ಲಿ ಮಾಳಿಂಗರಾಯ ಪಟ್ಟದ ದೇವರು ಗುರು ಮುತ್ಯಾ ಬಬಲಾದಿ, ಮಾಳಿಂಗರಾಯ ದೇವರ ಅರ್ಚಕರಾದ ಸಿದ್ದಣ ಪೂಜಾರಿ, ಹಿರಿಯರಾದ ದುಂಡಪ್ಪ ಬಬಲಾದಿ, ಕಲ್ಲಪ್ಪ ಗಿಡಗಿಂಚಿ, ಗ್ರಾಮಪಂಚಾಯತ್ ಸದಸ್ಯರರಾದ ಬಸವರಾಜ ಆಲಗೂರ, ಸಂತೋಷ ಮಮದಾಪೂರ, ಜಾತ್ರೆಯಲ್ಲಿ ನೇರೆದಿದ್ದ ಭಕ್ತ ಸಮೂಹ ಉಪಸ್ಥಿತರಿದ್ದರು.

Previous articleಶ್ರೀಮಂತ ಮತ್ತು ಬಡ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಆಸ್ತಿ ಎಷ್ಟು?
Next articleಮೈಸೂರು ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್: ಪ್ರತಾಪ್ ಸಿಂಹ ಅಪಸ್ವರ

LEAVE A REPLY

Please enter your comment!
Please enter your name here