ಪೊಲೀಸ್ ಮತ್ತು ಕಂದಾಯ ಇಲಾಖೆಯಿಂದ ದಿಟ್ಟ ಕ್ರಮ

0
10
MANJUNATH HARLAPUR

ಹುಬ್ಬಳ್ಳಿ: ಪಡಿತರ ಅಕ್ಕಿ ಕಳ್ಳಸಾಗಣೆ ಮಾಡಿ, ಸರ್ಕಾರಿ ಯೋಜನೆಗೆ ಮೋಸ ಮತ್ತು ಬೊಕ್ಕಸದ ನಷ್ಟಕ್ಕೆ ಕಾರಣವಾಗಿದ್ದ ಹುಬ್ಬಳ್ಳಿ ಉದ್ಯಮಿ ಮಂಜುನಾಥ ಹರ್ಲಾಪುರ ಅವರನ್ನು ಗಡಿಪಾರು ಮಾಡಿ ಧಾರವಾಡ ಉಪ ವಿಭಾಗಾಧಿಕಾರಿ ಅಶೋಕ್ ತೆಲಿ ಆದೇಶ ಹೊರಡಿಸಿದ್ದಾರೆ.
ಬಡವರಿಗೆ ಸಲ್ಲಬೇಕಿದ್ದ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದಾರೆಂಬ ಆರೋಪದ ಮೇಲೆ ಉದ್ಯಮಿ ಮಂಜುನಾಥ್ ವಿರೂಪಾಕ್ಷಪ್ಪ ಹರ್ಲಾಪುರ ಅವರನ್ನು ಧಾರವಾಡದಿಂದ ಬೀದರ ಜಿಲ್ಲೆಗೆ ಆರು ತಿಂಗಳ ಕಾಲ ಗಡಿಪಾರು ಮಾಡಲಾಗಿದೆ. ಹುಬ್ಬಳಿಯ ಬಿಡನಾಳ ನಿವಾಸಿಯಾಗಿರುವ ಮಂಜುನಾಥ್, ಹಲವಾರು ವರ್ಷಗಳಿಂದ ಬಾಲಾಜಿ ಟ್ರೇಡಿಂಗ್ ಹೆಸರಿನಲ್ಲಿ ನಲ್ಲಿ ಬಡವರಿಗೆ ನೀಡುವ ಪಡಿತರ ಅಕ್ಕಿಯನ್ನು ಬೇರೆ ರಾಜ್ಯಕ್ಕೆ ಕಳ್ಳಸಾಗಣೆ ಮಾಡುತ್ತಿದ್ದ ಆರೋಪ ಇತ್ತು. ಇದರ ವಿರುದ್ಧ ಧ್ವನಿ ಎತ್ತಿದ್ದ ಹಲವು ಸಾಕ್ಷಿಗಳನ್ನು ಕೂಡ ನಾಶ ಮಾಡಿದ್ದ ಆರೋಪ ಅವರ ಮೇಲಿತ್ತು. ಹೀಗಾಗಿ ಧಾರವಾಡ ಎಸ್‌ಪಿ ಲೋಕೇಶ್, ಮಂಜುನಾಥ್ ಗಡಿಪಾರಿಗೆ ಎಸಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಉಪ ವಿಭಾಗಾಧಿಕಾರಿ ಅಶೋಕ್ ತೆಲಿ ಅವರು, ಆರು ತಿಂಗಳ ಗಡಿಪಾರು ಮಾಡಿ ಆದೇಶ ಹೊರಡಿಸಿದ್ದಾರೆ. ಜೊತೆಗೆ ಆರೋಪಿಗೆ ಮುಂದಿನ ವಿಧಾಸಭಾ ಚುನಾವಣೆಯಲ್ಲಿ ಮತದಾನ ಮಾಡಲು ಅವಕಾಶ ನೀಡಿದ್ದಾರೆ.

Previous articleಬಸ್ಸಿನಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 27.34 ಲಕ್ಷ ವಶಕ್ಕೆ
Next articleಶಿವಮೊಗ್ಗ: ಮೀಸಲಾತಿ ವಿರೋಧಿಸಿ ಪ್ರತಿಭಟನೆ