ಟಿ20 ವಿಶ್ವಕಪ್‌ನಿಂದಲೂ ಜಡೇಜಾ ಹೊರಕ್ಕೆ

0
13
ರವೀಂದ್ರ ಜಡೇಜಾ

ನವದೆಹಲಿ: ಗಾಯದ ಸಮಸ್ಯೆಯಿಂದಾಗಿ ಏಷ್ಯಾ ಕಪ್ ಕ್ರಿಕೆಟ್ ಪಂದ್ಯಾವಳಿಯಿಂದ ಹೊರಬಿದ್ದಿರುವ ಆಲ್‌ರೌಂಡರ್ ರವೀಂದ್ರ ಜಡೇಜಾ, ಐಸಿಸಿ ಟಿ20 ವಿಶ್ವಕಪ್‌ನಿಂದ ಕೂಡ ಹೊರಬಿದ್ದಿದ್ದಾರೆ.
ಬಲ ಮೊಣಕಾಲು ನೋವಿನಿಂದ ಬಳಲುತ್ತಿರುವ ರವೀಂದ್ರ ಜಡೇಜಾ ಶಸ್ತ್ರ ಚಿಕಿತ್ಸೆಗೆ ಒಳಗಾಗಬೇಕಿರುವುದರಿಂದ ಅವರು ಏಷ್ಯಾ ಕಪ್‌ನಿಂದ ಮಾತ್ರವಲ್ಲದೇ ಮುಂಬರುವ ಟಿ20 ವಿಶ್ವಕಪ್‌ನಿಂದ ಕೂಡ ಹೊರಬಿದ್ದಿದ್ದಾರೆಂದು ಬಿಸಿಸಿಐ ಮೂಲಗಳು ಹೇಳಿವೆ. ಏಷ್ಯಾ ಕಪ್ ಕ್ರಿಕೆಟ್ ಪಂದ್ಯಾವಳಿಗೆ ರವೀಂದ್ರ ಜಡೇಜಾ ಅವರ ಬದಲು ಅಕ್ಷರ್ ಪಟೇಲ್ ಅವರನ್ನು ಆಯ್ಕೆ ಮಾಡಲಾಗಿದೆ.

ರವೀಂದ್ರ ಜಡೇಜಾ
Previous articleಬನಹಟ್ಟಿಯಲ್ಲಿ ಹಂದಿ ಜ್ವರ ಪತ್ತೆ
Next articleಪರ್ಫಾರ್ಮ್ಯಾಕ್ಸ್ ಬ್ರ‍್ಯಾಂಡ್‌ಗೆ ಬುಮ್ರಾ ಅಂಬಾಸಿಡರ್