ಸಚಿವ ಸ್ಥಾನದ ಆಕಾಂಕ್ಷಿಗಳ ಪಟ್ಟಿಗೆ ಹೊಸ ಸೇರ್ಪಡೆ

0
77

ಹಾವೇರಿ: ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರು ಮಂಗಳವಾರ ನನಗೆ ಭೇಟಿಗೆ ಸಮಯ ಕೊಟ್ಟಿದ್ದಾರೆ. ಭೆಟ್ಟಿಯಾದಾಗ ಸಚಿವ ಸ್ಥಾನದ ಆಶಯ ಬಿಚ್ಚಿಡುತ್ತೇನೆ ಎಂದು ವಿಧಾನಸಭಾ ಉಪಾಧ್ಯಕ್ಷ ರುದ್ರಪ್ಪ ಲಮಾಣಿ ಹೇಳಿದ್ದಾರೆ.

ಹಾವೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಸ್ಥಾನ ಕೊಡುವುದಾಗಿ ಸರ‍್ಜೇವಾಲಾ ಹಿಂದೆಯೂ ಹೇಳಿದ್ದರು, ನಾಳೆಯೂ ಭೇಟಿಯಾದಾಗ ಸಚಿವ ಸ್ಥಾನ ಕೇಳುತ್ತೇನೆ. ಕೇಳೋಕೆ ಏನು ರೊಕ್ಕ ಕೊಡಬೇಕಾ? ನಮ್ಮ ಡಿಮ್ಯಾಂಡ್ ಇದೆ, ಕೊಡಿ ಎಂದು ಕೇಳುತ್ತೇನೆ. ಕೊಡುವುದು ಬಿಡುವುದು ಅವರಿಗೆ ಬಿಟ್ಟಿದ್ದು ಎಂದು ಲಮಾಣಿ ಹೇಳಿದರು.

ಶಾಸಕರಾದವರಿಗೆ ಸಚಿವರಾಗುವ ಆಸೆ ಇರುತ್ತೆ, ಕೊಟ್ಟರೆ ಯಾರೂ ಬೇಡ ಅನ್ನಲ್ಲ. ಹೈಕಮಾಂಡ್ ತರ‍್ಮಾನವೇ ಅಂತಿಮ ಎಂದ ಲಮಾಣಿ, ನಾಳೆ ರ‍್ಕಾರದ ಸಾಧನೆ, ಸಂಘಟನೆ ಬಗ್ಗೆ ರ‍್ಚೆ ಮಾಡಬಹುದು. ನಾನು ವಿಧಾನಸಭಾ ಉಪಾಧ್ಯಕ್ಷರಾದ ಮೇಲೆ ನಾನು ಕೇಳಿದ ಅನುದಾನ ಕೊಟ್ಟಿದ್ದಾರೆ. ೧೦೦ಕ್ಕೆ ೧೦೦ ಕೊಡುವುದು ಆ ದೇವರಿಂದಲೂ ಸಾಧ್ಯವಿಲ್ಲ ಎಂದರು.

Previous articleಆರ್‌ಎಸ್‌ಎಸ್ ಬ್ಯಾನ್ ಅವಶ್ಯ
Next articleದೆವ್ವ ಬಿಡಿಸುವ ನೆಪದಲ್ಲಿ  ಥಳಿತ : ಮಹಿಳೆ ಸಾವು