ಶಾರುಖ್‌ಗೆ Y+ ಭದ್ರತೆ

0
17

ಮುಂಬೈ: ಬಾಲಿವುಡ್‌ ನಟ ಶಾರುಖ್‌ ಖಾನ್‌ ಅವರಿಗೆ ಮಹಾರಾಷ್ಟ್ರ ಸರ್ಕಾರವು ದಿಢೀರನೆ ವೈ ಪ್ಲಸ್‌ ಶ್ರೇಣಿಯ ಭದ್ರತೆ ಒದಗಿಸಿದೆ.
ಮಹಾರಾಷ್ಟ್ರದ ಉನ್ನತ ಪ್ರಭಾವಿ ಸಮಿತಿಯು ಶಾರುಖ್‌ ಖಾನ್‌ ಅವರಿಗೆ ವೈ ಪ್ಲಸ್‌ ಶ್ರೇಣಿಯ ಭದ್ರತೆ ಒದಗಿಸಬೇಕು ಎಂದು ಶಿಫಾರಸು ಮಾಡಿದ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಸರ್ಕಾರವು ಭದ್ರತೆ ಒದಗಿಸಿದೆ ಎಂದು ತಿಳಿದುಬಂದಿದೆ. ಇತ್ತೀಚೆಗೆ ಶಾರುಖ್‌ಗೆ ಜೀವ ಬೆದರಿಕೆ ಇರುವ ನಿಟ್ಟಿನಲ್ಲಿ ವೈ+ ಸೆಕ್ಯುರಿಟಿಯನ್ನು ಒದಗಿಸಲಾಗಿದೆ ಎನ್ನಲಾಗಿದ್ದು. ಈ ವರ್ಷ ಎರಡು ಸಿನಿಮಾಗಳ ಮೂಲಕ ಬಾಲಿವುಡ್​ನಲ್ಲಿ ಘರ್ಜಿಸಿದ ಶಾರುಖ್ ಖಾನ್ ಅವರಿಗೆ ಭದ್ರತೆ ಅನುಮತಿಸಲಾಗಿದೆ. ಮಾಹಿತಿಯ ಪ್ರಕಾರ Y+ ವಿಭಾಗದಲ್ಲಿ ನಟ ಆರು ಕಮಾಂಡೋಗಳು, ನಾಲ್ಕು ಪೊಲೀಸ್ ಸಿಬ್ಬಂದಿ ಮತ್ತು ಟ್ರಾಫಿಕ್ ಕ್ಲಿಯರೆನ್ಸ್ ವಾಹನ ಸೇರಿದಂತೆ 11 ಭದ್ರತಾ ಸಿಬ್ಬಂದಿಯನ್ನು ಪಡೆಯುತ್ತಾರೆ.

Previous articleಭಾರತಕ್ಕೆ ಭರ್ಜರಿ ಶುಭಾರಂಭ
Next articleಕಾಫಿತೋಟದಲ್ಲಿ ಕಾಡಾನೆಗಳ ಹಿಂಡು