ವಿಷಪೂರಿತ ಬಳ್ಳಿ ತಿಂದು 48 ಕುರಿಗಳು ಸಾವು

0
16
ಕುರಿ

ಹೊಸಪೇಟೆ: ವಿಷಪೂರಿತ ಬಳ್ಳಿ ತಿಂದು 48 ಕುರಿಗಳು ಮೃತಪಟ್ಟಿರುವ ಘಟನೆ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಉಪನಾಯಕನಹಳ್ಳಿ ಬಳಿ ಗುರುವಾರ ಜರುಗಿದೆ.
ಚೌಡಪ್ಪ, ಮಲ್ಲಪ್ಪ ಹಾಗೂ ನಾಗರಾಜ್ ಎಂಬುವವರಿಗೆ ಸೇರಿದ ಕುರಿಗಳಿವು. ಕಳೆದ ಎರಡು, ಮೂರು ದಿನದಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಕುರಿಗಳಿಗೆ ತಿನ್ನಲು ಮೇವು ಸಿಗದ ಕಾರಣ ವಿಷಪೂರಿತ ಬಳ್ಳಿಯನ್ನು ತಿಂದು ಸಾವು ಕಂಡಿವೆ. ಇದರಿಂದಾಗಿ ಲಕ್ಷಾಂತರ ರೂ. ನಷ್ಟವಾಗಿದೆ ಜಿಲ್ಲಾಡಳಿತ ಸೂಕ್ತ ಪರಿಹಾರ ನೀಡಲು ಕುರಿಮಾಲೀಕರು ಆಗ್ರಹಿಸಿದ್ದಾರೆ.
ಘಟನಾ ಸ್ಥಳಕ್ಕೆ ತಾಲೂಕು ಪಶುವೈದ್ಯಾಧಿಕಾರಿ ಡಾ. ಸೂರಪ್ಪ ಭೇಟಿ ಪರಿಶೀಲಿಸಿದರು. ಅತಿ ಹೆಚ್ಚು ಹಸಿರು ಬಳ್ಳಿಯನ್ನು ತಿಂದಿರುವುದರಿಂದ ಕುರಿಗಳಿಗೆ ಹೊಟ್ಟೆ ಉಬ್ಬಿದೆ. ಜೊತೆಗೆ ಉಸಿರಾಟದ ತೊಂದರೆಯಾಗಿ ಕುರಿಗಳು ಸಾವನ್ನಪ್ಪಿವೆ ಎಂದರು.

Previous articleಕಾಂಗ್ರೆಸ್‌ದು 85% ಕಮೀಷನ್ ಸರ್ಕಾರ
Next articleಮೋದಿ ಯಾವ ಗುರು ಎಂಬುವುದನ್ನು ಪಾಕ್‌ಗೆ ಕೇಳಿ