ದ. ಕ. ಮತ್ತು ಉಡುಪಿ ಜಿಲ್ಲಾಧಿಕಾರಿಗಳ ವರ್ಗಾವಣೆ

0
39

ಮಂಗಳೂರು: ದ.ಕ. ಹಾಗೂ ಉಡುಪಿ ಜಿಲ್ಲೆಯ ಜಿಲ್ಲಾಧಿಕಾರಿಗಳನ್ನು ವರ್ಗಾವಣೆ ಮಾಡಿ ಇದೀಗ ಸರ್ಕಾರ ಆದೇಶಿಸಿದೆ.
ನೂತನ ಡಿಸಿಯಾಗಿ ಮಂಗಳೂರಿಗೆ ದರ್ಶನ್ ಎಚ್.ವಿ. ನೇಮಕಗೊಂಡಿದ್ದಾರೆ. ಈ ಹಿಂದೆ ಇವರು ಮಂಗಳೂರಿಗೆ ನೇಮಕಗೊಳ್ಳುವ ಮೊದಲು ಬೆಂಗಳೂರಿನಲ್ಲಿ ವಾಣಿಜ್ಯ ತೆರಿಗೆಗಳ (ಸೇವಾ ವಿಶ್ಲೇಷಣಾ ವಿಭಾಗ) ಹೆಚ್ಚುವರಿ ಆಯುಕ್ತರಾಗಿ ಸೇವೆ ಸಲ್ಲಿಸಿದ್ದರು. ಉಡುಪಿ ಡಿಸಿಯಾಗಿ ಸ್ವರೂಪ ಟಿ.ಕೆ. ಅವರನ್ನು ನೇಮಿಸಲಾಗಿದೆ. ಈ ಹಿಂದೆ ಇವರು ಬೆಂಗಳೂರಿನಲ್ಲಿ ಇ-ಆಡಳಿತ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ನಿರ್ದೇಶಕಿಯಾಗಿ ಸೇವೆ ಸಲ್ಲಿಸುತ್ತಿದ್ದರು.

Previous articleಒಂದೇ ದಿನ 7 ವಿಮಾನಗಳ ಪ್ರಯಾಣ ಹಠಾತ್ ರದ್ದು
Next articleಕೊಪ್ಪಳ ಜಿಲ್ಲಾಧಿಕಾರಿಯಾಗಿ ಸುರೇಶ ಇಟ್ನಾಳ