ಜಯಶಂಕರ್‌ ನಿರ್ದೇಶನದ ‘ಶಿವಮ್ಮ’ ಚಿತ್ರಕ್ಕೆ ಯುರೋಪಿನ ಪ್ರತಿಷ್ಠಿತ ಪ್ರಶಸ್ತಿ

ಶಿವಮ್ಮ

ಜಯಶಂಕರ್‌ ಆರೇರ್‌ ನಿರ್ದೇಶನದ ಶಿವಮ್ಮ ಸಿನಿಮಾ ಬೂಸಾನ್ ಚಿತ್ರೋತ್ಸವದ ಪ್ರತಿಷ್ಠಿತ ‘ನ್ಯೂ ಕರೆಂಟ್ಸ್’ ಪ್ರಶಸ್ತಿ ಪಡೆದು ಖ್ಯಾತಿಗಳಿಸಿತ್ತು. ಇದೀಗ ಇದೇ ಚಿತ್ರ ಮತ್ತೊಂದು ಅಂತಾರಾಷ್ಟ್ರೀಯ ಪ್ರಶಸ್ತಿ ಪಡೆಯುವ ಮೂಲಕ ಸುದ್ದಿಯಾಗಿದೆ. ಯುರೋಪಿನ ಪ್ರತಿಷ್ಠಿತ ಫೆಸ್ಟಿವಲ್‌ ಎಫ್​3 ಕಾಂಟಿನೆಂಟ್ಸ್​ನ 44 ನೇ ಆವೃತ್ತಿಯಲ್ಲಿ ‘ಯಂಗ್‌ ಜ್ಯೂರಿ ಆವಾರ್ಡ್‌’ ಅನ್ನು ಶಿವಮ್ಮ ಚಿತ್ರ ಪಡೆದುಕೊಂಡಿದೆ. ಸ್ವತಃ ನಿರ್ಮಾಪಕ ರಿಷಬ್‌ ಶೆಟ್ಟಿ ಅವರೇ ಸಾಮಾಜಿಕ ಜಾಲತಾಣದ ಮೂಲಕ ಈ ವಿಷಯವನ್ನು ಹಂಚಿಕೊಂಡಿದ್ದಾರೆ.