ಗೌರವ ಡಾಕ್ಟರೇಟ್ ಸ್ವೀಕರಿಸಿ ಬಾವುಕರಾದ ನಟ ರಮೇಶ್

0
19
ರಮೇಶ ಅರವಿಂದ

ಬೆಳಗಾವಿ: ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪ್ರಶಸ್ತಿ ಪಡೆಯುತ್ತಿರುವುದು ನಿಜಕ್ಕೂ ನನಗೆ ಸಂತಸ ತಂದಿದೆ. ನನ್ನ ತಂದೆಯವರು ಈ ಸಂದರ್ಭದಲ್ಲಿ ಇದ್ದಿದ್ದರೆ ಅವರೂ ತುಂಬಾ ಖುಷಿ ಪಡುತ್ತಿದ್ದರು ಎಂದು ಅಪ್ಪನನ್ನು ನೆನೆದು ರಮೇಶ ಅರವಿಂದ ಬಾವುಕರಾದರು.
ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಬುಧವಾರ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, ನನಗೆ ಗೌರವ ಡಾಕ್ಟರೇಟ್ ಸಿಕ್ಕಿದೆ ಎಂದು ಗೊತ್ತಾದ ತಕ್ಷಣವೇ ನಮ್ಮ ಫ್ಯಾಮಿಲಿ ಗ್ರೂಪ್‌ಗೆ ಆ ಮೆಸೇಜ್ ಹಾಕಿದೆ. ನನ್ನ ಅಣ್ಣ, ಅಕ್ಕ, ತಮ್ಮ ಮೂರು ಜನರಿಂದ ಅಭಿನಂದನೆಗಳು ಕಣೋ… ಅಪ್ಪ ಇದ್ದಿದ್ರೆ ತುಂಬಾ ಖುಷಿ ಪಡುತ್ತಿದ್ದರು ಎಂದು ಮೂವರೂ ಒಂದೇ ರೀತಿ ಉತ್ತರ ಮಾಡಿದ್ರು…..ಹೌದು, ಹೆತ್ತವರು ನಮ್ಮನ್ನು ನೋಡಿ ಖುಷಿಯಾಗುವಂತಹ ವಿಷಯಗಳು, ನಮ್ಮ ಆಪ್ತರು, ಕುಟುಂಬ ನಮ್ಮನ್ನ ನೋಡಿ ಖುಷಿ ಪಡುವ ವಿಷಯಗಳು ಸಿಕ್ಕಾಗ ನಮಗೂ ತುಂಬಾ ಖುಷಿ ಆಗುತ್ತದೆ ಅಲ್ವಾ ? ನನಗೂ ಇದು ತುಂಬಾ ಖುಷಿಯ ವಿಷಯ ಎಂದರು.

Previous article17ರಿಂದ ಧಾರವಾಡ ʼಕೃಷಿಮೇಳ’
Next articleಅಯೋಧ್ಯೆ ಹಾಗೆ ಕಾಶಿಯಲ್ಲಿಯೂ ಮುಸ್ಲಿಮರ ಸಹಕಾರ: ಈಶ್ವರಪ್ಪ ವಿಶ್ವಾಸ