ಕೊಟ್ಟಿಗೆಗೆ ನುಗ್ಗಿದ ಚಿರತೆ : ಕುರಿ ಮೇಕೆಗಳ ಮೇಲೆ ದಾಳಿ.

0
53

ಮಳವಳ್ಳಿ: ಕೊಟ್ಟಿಗೆಗೆ ನುಗ್ಗಿದ ಚಿರತೆ ಕುರಿ ಮೇಕೆಗಳ ಮೇಲೆ ದಾಳಿ ಮಾಡಿ ನಾಲ್ಕು ಮೇಕೆಗಳನ್ನು ಕೊಂದು ತಿಂದಿರುವ ಘಟನೆ ಮಳವಳ್ಳಿ ತಾಲ್ಲೂಕಿನ ರಾವಣಿ ಗ್ರಾಮದಲ್ಲಿ ಜರುಗಿದೆ.
ಸುಮಾರು 3 ಗಂಟೆ ಸಮಯದಲ್ಲಿ ಈ ಘಟನೆ ಜರುಗಿದ್ದು, ಈ ಗ್ರಾಮದ ಹರ್ಷ ಎಂಬುವರು ರಾತ್ರಿ ಕೊಟ್ಟಿಗೆಯಲ್ಲಿ ಕೂಡಿ ಹಾಕಿದ್ದ ಮೇಕೆ ಹಿಂಡಿನ ಮೇಲೆ ದಾಳಿ ಮಾಡಿರುವ ಚಿರತೆ ನಾಲ್ಕು ಮೇಕೆಗಳನ್ನು ಕೊಂದು ತಿಂದು ಪರಾರಿಯಾಗಿದೆ ಎನ್ನಲಾಗಿದೆ.

ಮೇಕೆಗಳ ಚೀರಾಟ ಕೇಳಿ ಮನೆ ಯವರು ಬಂದು ನೋಡುತ್ತಿದ್ದಂತೆ ಚಿರತೆ ಪರಾರಿಯಾಗಿದೆ. ಸುಮಾರು ಒಂದು ಲಕ್ಷ ರೂ ಬೆಲೆ ಬಾಳುವ ಮೇಕೆಗಳು ಚಿರತೆಗೆ ಬಲಿಯಾಗಿದ್ದು, ಈ ಕೂಡಲೇ ಅರಣ್ಯ ಇಲಾಖೆಯವರು ಚಿರತೆಯನ್ನು ಸೆರೆ ಹಿಡಿಯಲು ಕ್ರಮವಹಿಸಬೇಕು.
ಜೊತೆಗೆ ಸೂಕ್ತ ಪರಿಹಾರ ದೊರಕಿಸಬೇಕೆಂದು ಮೇಕೆ ಕಳೆದುಕೊಂಡ ರೈತ ಹರ್ಷ ಅರಣ್ಯ ಇಲಾಖೆಯನ್ನು ಆಗ್ರಹಿಸಿದ್ದಾರೆ.

ಈ ಸಂಬಂಧ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿ ಶಿವರಾಜ್ ಭೇಟಿ ನೀಡಿ ಮೇಲಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ನೀಡಲಾಗುವುದು ಎಂದು ತಿಳಿಸಿದರು.

Previous articleಕೋರ್ಟ್‌ ಆದೇಶ ಉಲ್ಲಂಘಿಸಿ ಕಸಾಪ ಬಗ್ಗೆ ಅಪಪ್ರಚಾರ
Next articleಜಾತಿ ಗಣತಿ ಕೇಂದ್ರದ ಮನಃಪೂರ್ವಕ ಘೋಷಣೆಯಲ್ಲ