‘ಕಬ್ಜ’ ಬಿಡುಗಡೆ ಮುನ್ನ ತಿರುಪತಿ ತಿಮ್ಮಪ್ಪನ ದರ್ಶನ

0
25
ಕಬ್ಜ

ಕಬ್ಜ ಸಿನಿಮಾ ರಿಲೀಸ್‍ಗೆ ಕೌಂಟ್‍ಡೌನ್ ಶುರುವಾಗಿದೆ. ನಾಳೆ ವಿಶ್ವಾದ್ಯಂತ ಸಿನಿಮಾ ರಿಲೀಸ್ ಆಗುತ್ತಿದೆ. ಕನ್ನಡ ಸೇರಿ ಐದು ಭಾಷೆಗಳಲ್ಲಿ ಸಿನಿಮಾ ತೆರೆಗೆ ಬರುಲಿದ್ದು. ನಾಳೆ ಪುನೀತ್ ರಾಜ್ ಕುಮಾರ್ ಹುಟ್ಟುಹಬ್ಬ. ಅಂದೇ ತೆರೆಗೆ ಬರುತ್ತಿರುವುದು ಅಪ್ಪು ಅಭಿಮಾನಿಗಳಿಗೂ ಖುಷಿಯಾಗಿದೆ. ಚಿತ್ರದಲ್ಲಿ ಕಿಚ್ಚ ಸುದೀಪ್ ಮತ್ತು ಶಿವರಾಜ್ ಕುಮಾರ್ ಅವರು ಸಹ ನಟಿಸಿದ್ದು ಅವರ ಅಭಿಮಾನಿಗಳು ಕೂಡ ಥ್ರಿಲ್ ಆಗಿದ್ದಾರೆ. ಚಿತ್ರ ಬಿಡುಗಡೆಗೆ ಮುನ್ನ ದೇವರ ಆಶೀರ್ವಾದ ಪಡೆಯಲು ತಿರುಪತಿ ತಿಮ್ಮಪ್ಪನ ದರ್ಶನ ಪಡೆಯಲು ಚಿತ್ರ ತಂಡ ಖಾಸಗಿ ವಿಶೇಷ ವಿಮಾನದಲ್ಲಿ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಉಪೇಂದ್ರ ಮತ್ತು ಚಿತ್ರತಂಡ ಹೊರಟಿದೆ. ವಿಮಾನದೊಳಗೆ ಕುಳಿತಿರುವ ಹಲವು ಚಿತ್ರಗಳನ್ನು ನಟ ಉಪೇಂದ್ರ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

Previous article35 ವರ್ಷದ ಗ್ರಾಮ ಪಂಚಾಯಿತಿ ಸದಸ್ಯ ಆತ್ಮಹತ್ಯೆ
Next articleಕಮಲ ತೊರೆದ ಬಿಎಸ್‌ವೈ ಆಪ್ತ ಲಿಂಬಿಕಾಯಿ