ಕನ್ನಡದ ಹಾಸ್ಯ ನಟ ಗಂಡಸಿ ನಾಗರಾಜ್ ಇನ್ನಿಲ್ಲ

0
13
ಗಂಡಸಿ ನಾಗರಾಜ್

ಬೆಂಗಳೂರು: ಸ್ಯಾಂಡಲ್‌ವುಡ್‌ನ ಜನಪ್ರಿಯ ಕಾಸ್ಟ್ಯೂಮ್ ಡಿಸೈನರ್ ಮತ್ತು ಹಾಸ್ಯ ನಟ ಗಂಡಸಿ ನಾಗರಾಜ್ ಇಂದು ನಿಧನರಾಗಿದ್ದಾರೆ. ಅನಾರೊಗ್ಯದಿಂದ ಬಳಲುತ್ತಿದ್ದ ಸ್ಯಾಂಡಲ್‌ವುಡ್‌ ಖ್ಯಾತ ಹಾಸ್ಯ ನಟ ಗಂಡಸಿ ನಾಗರಾಜ್ ಅವರು ಬೆಂಗಳೂರಿನಲ್ಲಿ ವಿಧಿವಶರಾಗಿದ್ದಾರೆ. ಅವರಿಗೆ 65 ವರ್ಷ ವಯಸ್ಸಾಗಿತ್ತು. ಗಂಡಸಿ ನಾಗರಾಜ್ ಕನ್ನಡದ 1,000 ಕ್ಕೂ ಹೆಚ್ಚು ಚಲನಚಿತ್ರಗಳ ನಟಿಸಿದ್ದಾರೆ.ಹಾಸ್ಯ ನಟ ಗಂಡಸಿ ನಾಗರಾಜ್ ಅವರು ಗುಂಡನ ಮದುವೆ, ರಾಯರ ಮಗ, ಹಬ್ಬ, ಪರ್ವ, ಮಾತಾಡು ಮಾತಾಡ್ ಮಲ್ಲಿಗೆ, ಕೋಟಿಗೊಬ್ಬ-3 ಚಿತ್ರಗಳಲ್ಲಿ ನಟಿಸಿದ್ದರು. ಹಾಗೆಯೇ, ನವರಸ ನಾಯಕ ಜಗ್ಗೇಶ್ ಅವರ ಆಪ್ತ ವಸ್ತ್ರಾಲಂಕಾರ ಮಾಡುತ್ತಿದ್ದರು. ಅವರು ನಟಿಸಿದ ಪ್ರಮುಖ ಚಿತ್ರಗಳೆಂದರೆ ಸರ್ವರ್ ಸೋಮಣ್ಣ, ಬಂಡ ನನ್ನ ಗಂಡ, ಹಬ್ಬ, ಶ್ರೀ ಮಂಜುನಾಥ ಮತ್ತು ರಾಜ ಹುಲಿಯಲ್ಲಿ ಅವರು ಅಭಿನಯಿಸಿದ್ದಾರೆ. ಜೊತೆಗೆ ಕೆ3 ಚಿತ್ರದಲ್ಲಿ ಕೊನೆ ಬಾರಿಗೆ ಅವರು ನಟಿಸಿದ್ದರು.

Previous articleಕಾರಿಡಾರ್‌ಗೆ ಭೂಸ್ವಾಧೀನ ವಿರೋಧಿಸಿ ರೈತರಿಂದ ಧರಣಿ
Next articleನಾನು ಬಿಜೆಪಿಯಲ್ಲಿ ಸಕ್ರಿಯನಾಗಿಲ್ಲ, ಅಕ್ರಮವಾಗಿದ್ದೇನೆ : ಸಂದೇಶ ನಾಗರಾಜ