ಹಿಂದೂ ಮುಖಂಡನ ಮೊಬೈಲ್​ನಲ್ಲಿ ಕರಾವಳಿ ರಾಜಕಾರಣಿಯ 50 ಅಶ್ಲೀಲ ವಿಡಿಯೋ ಪತ್ತೆ

0
27

ಮಂಗಳೂರು: ಖಾಸಗಿ ಬಸ್​ಗೆ ಕಲ್ಲು ತೂರಿ ಹಾನಿಗೊಳಿಸಿದ ಪ್ರಕರಣದಲ್ಲಿ ಬಂದಿತನಾಗಿ ಜಾಮೀನು ಪಡೆದು ಬಿಡುಗಡೆಗೊಂಡಿದ್ದ ಹಿಂದೂ ಮುಖಂಡನ ಮೊಬೈಲ್​ನಲ್ಲಿ ರಾಜಕಾರಣಿ ಒಬ್ಬರ ಅಶ್ಲೀಲ ವಿಡಿಯೋ ಪತ್ತೆ ಆಗಿರುವ ಘಟನೆ ನಡೆದಿದೆ.
ಮಂಗಳೂರು ಪೊಲೀಸರ ತನಿಖೆ ವೇಳೆ ಹಿಂದೂ ಜಾಗರಣಾ ವೇದಿಕೆಯ ದಕ್ಷಿಣ ಕನ್ನಡ ಜಿಲ್ಲಾ ಸಹಸಂಯೋಜಕ ಸಮಿತ್ ರಾಜ್ ಧರೆಗುಡ್ಡೆ ಮೊಬೈಲ್​​​ನಲ್ಲಿ ಐವತ್ತಕ್ಕೂ ಅಧಿಕ ಅಶ್ಲೀಲ ವಿಡಿಯೋಗಳು ಪತ್ತೆಯಾಗಿದ್ದು, ಇದರಲ್ಲಿ ಕರಾವಳಿ ರಾಜಕಾರಣಿಯೊಬ್ಬರ ವಿಡಿಯೋ ಕೂಡ ಇದೆ ಎನ್ನಲಾಗುತ್ತಿದೆ. ಸದ್ಯ ಈ ಕುರಿತಾಗಿ ಮೂಡಬಿದಿರೆ ಠಾಣೆಯಲ್ಲಿ ಎಫ್​​ಐಆರ್​ ದಾಖಲಾಗಿದೆ. ಅಪಘಾತವೆಸಗಿದ ಖಾಸಗಿ ಬಸ್​ಗೆ ಕಲ್ಲು ತೂರಿ ಹಾನಿಗೊಳಿಸಿದ ಪ್ರಕರಣದಲ್ಲಿ ಸಮಿತ್ ರಾಜ್ ಧರೆಗುಡ್ಡೆರನ್ನು ಮೂಡಬಿದಿರೆ ಪೊಲೀಸರು ಇತ್ತೀಚೆಗೆ ಬಂಧಿಸಿದ್ದರು. ಪ್ರಕರಣದ ಹೆಚ್ಚಿನ ತನಿಖೆಗಾಗಿ ಅವರ ಮೊಬೈಲ್ ವಶಕ್ಕೆ ಪಡೆಯಲಾಗಿತ್ತು. ಪೊಲೀಸರು ದತ್ತಾಂಶಗಳನ್ನು ಎಕ್ಸ್‌ಟ್ರಾಕ್ಟ್ ಮಾಡಿಸಲು ಕೋರ್ಟ್ ಮತ್ತು ಮೇಲಾಧಿಕಾರಿಗಳ ಅನುಮತಿ ಪಡೆದಿದ್ದರು. ಅದರಂತೆ ಮೊಬೈಲ್ ಡೇಟಾ ಎಕ್ಸ್‌ಟ್ರಾಕ್ಟ್​​ ವೇಳೆ 50ಕ್ಕೂ ಹೆಚ್ಚು ಅಶ್ಲೀಲ ವಿಡಿಯೋಗ ತುಣುಕುಗಳು ಪತ್ತೆ ಆಗಿವೆ. ವಿಡಿಯೋಗಳು ಪತ್ತೆಯಾದ ಹಿನ್ನೆಲೆಯಲ್ಲಿ ಇನ್ಸ್‌ಪೆಕ್ಟರ್ ಸಂದೇಶ್​ರಿಂದ ದೂರು ನೀಡಲಾಗಿದ್ದು, ಮೂಡಬಿದಿರೆ ಠಾಣೆಯಲ್ಲಿಈ ಸಂಬಂಧ ಪ್ರತ್ಯೇಕ ಎಫ್ಐಆರ್ ದಾಖಲಾಗಿದೆ. ವಿಡಿಯೋ ತುಣುಕುಗಳನ್ನು ಪ್ರಸಾರ ಮಾಡುವ, ಬೇರೆಯವರಿಗೆ ಕಳುಹಿಸುವ ಅಥವಾ ಸಾಮಾಜದ ಸ್ವಾಸ್ಥ್ಯವನ್ನು ಹಾಳು ಮಾಡುವಂತಹ ಸಾಧ್ಯತೆ ಹಿನ್ನೆಲೆ ಎಫ್ಐಆರ್ ದಾಖಲಿಸಲಾಗಿದೆ.

Previous articleಕಾಳಿ ಜಲವಿದ್ಯುತ್ ಯೋಜನೆ: ಭೂ ಸ್ವಾಧೀನ ವರದಿ ಕೇಳಿದ ಹೈಕೋರ್ಟ್
Next articleಹೊಸ ಕಿಚ್ಚು: ವರ್ಷಾಂತ್ಯಕ್ಕೆ ಸು’ದೀಪ’ ದರ್ಶನ